ಕಾರ್ಕಳ

ಮೂರ್ತೆದಾರರ ಸೇವಾ ಸಹಕಾರ ಸಂಘದ ಮಹಾಸಭೆ

ಮೂರ್ತೆದಾರರ ಸೇವಾ ಸಹಕಾರ ಸಂಘ (ನಿ) ಹಿರ್ಗಾನ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸ್ವಂತ ಕಛೇರಿಯಲ್ಲಿ ಸೆ. 20ರಂದು ಜರಗಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿಯವರು ಮಾತನಾಡಿ ಸಂಘವು ಇಷ್ಟು ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರೆ ಅದು ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಸಾಧ್ಯ. ಸಂಘವನ್ನು ಇನ್ನು ಹೆಚ್ಚು ಸಧೃಢಗೊಳಿಸುವಲ್ಲಿ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಹಾಗೂ ನಿಮ್ಮ ಸಹಕಾರಕ್ಕಾಗಿ ನಮ್ಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಸದಾ ನಿಮ್ಮ ಜೊತೆಗಿರುತ್ತೇವೆ. ಸಂಘದ ಬೆಳವಣಿಗೆಯಲ್ಲಿ ನಾವೆಲ್ಲರೂ ಶ್ರಮಿಸಿ ಇನ್ನೂ ಹೆಚ್ಚು ಲಾಭ ಗಳಿಸುವಲ್ಲಿ ನಮ್ಮ ಸಂಘ ಮುಂದುವರಿಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಘದ ಸದಸ್ಯರು ಹಾಗೂ ಮುನಿಯಾಲು ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರಾದ ಎಂ. ಆನಂದ ಪೂಜಾರಿಯವರು ಮಾತನಾಡಿ ಸಂಘವು ಒಳ್ಳೆ ಉನ್ನತಿ ಪಥದಲ್ಲಿ ಸಾಗುತ್ತಿದೆ. ಸ್ಥಾಪಕಾಧ್ಯಕ್ಷರಾದ ದಿ. ಸುಂದರ ಪೂಜಾರಿಯವರು ಬೆಳೆಸಿದ ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಬಂದಿದ್ದೀರಿ ಹಾಗೂ ಇನ್ನು ಹೆಚ್ಚಿನ ಹೊಸ ಶಾಖೆಯನ್ನು ತೆರೆಯುವ ನಿಟ್ಟಿನಲ್ಲಿ ಶ್ರಮ ವಹಿಸಿ ಎಂದು ಹಾರೈಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ರವರು ಆರ್ಥಿಕ ವರ್ಷದ ವರದಿ ಮಂಡಿಸಿ ಸಂಘದ ಪಾಲು ಬಂಡವಾಳ ರೂ 46.40 ಲಕ್ಷ, ಠೇವಣಿ 10.76 ಕೋಟಿ ರೂ. ಸ್ವಂತ ನಿಧಿ 88ಲಕ್ಷ ರೂ, ಹೊರಬಾಕಿ ಸಾಲಗಳು 8.10 ಕೋಟಿ ರೂ. ಹೊಂದಿ ರೂ 14.83 ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ. 10 ಡಿವಿಡೆಂಡ್ ಘೋಷಿಸಲಾಯಿತು.

ಈ ಸಂಧರ್ಭದಲ್ಲಿ ಸಂಘದ ವತಿಯಿಂದ 13 ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು ಹಾಗೂ ಸಂಘದ ಮೂಲಕ ಕಾರ್ಯನಿರ್ವಹಿಸುತ್ತಿರುವ 4 ಸ್ವ ಸಹಾಯ ತಂಡಗಳಿಗೆ ಒಟ್ಟು ರೂ. 6,28,000/- ಲಾಭಂಶದ ಚೆಕ್ ವಿತರಿಸಲಾಯಿತು. ಕೆರ್ವಾಶೆ ಗ್ರಾಮದ ಸಂಘದ ಸದಸ್ಯರಾದ ಶ್ರೀಮತಿ ಕುಸುಮಾ ಆನಂದ ಪೂಜಾರಿಯವರ ಮಗನಾದ ನಿಖಿಲ್ ಎ ಪೂಜಾರಿಯವರು ಸೆ.07 ರಂದು ಥೈಲಾಂಡಿನಲ್ಲಿ ನಡೆದ ಏಷ್ಯಾ ಯೋಗ ಚಾಂಪಿಯನ್ ಶಿಪ್’ನಲ್ಲಿ ಭಾರತವನ್ನು ಪ್ರತಿನಿಧಿಸಿ ಆರ್ಟಿಸ್ಟಿಕ್ ಸೋಲೋ ಮತ್ತು ಸಾಂಪ್ರಾದಾಯಿಕ ಯೋಗ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಪಡೆದಿರುತ್ತಾರೆ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಭಾಸ್ಕರ ಸಿ. ಕೋಟ್ಯಾನ್ ಹಾಗೂ ನಿರ್ದೇಶಕರಾದ ಆನಂದ ಪೂಜಾರಿ, ಬಾಬು ಪೂಜಾರಿ, ಸೋಮಪ್ಪ ಪೂಜಾರಿ, ನಾರಾಯಣ ಪೂಜಾರಿ, ಉದಯ ಪೂಜಾರಿ, ಜಾಣು ಪೂಜಾರಿ ಹಾಗೂ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

ನಿರ್ದೇಶಕರಾದ ಸತೀಶ್ ಪೂಜಾರಿಯವರು ಸ್ವಾಗತಿಸಿ ಅಮಿತಾರವರು ನಿರೂಪಿಸಿ ಸುರೇಖಾರವರು ವಂದಿಸಿದರು.

 

 

Related posts

ಇಂಡಿಪೆಂಡೆನ್ಸ್ ಫುಟ್ಬಾಲ್ ಕಪ್: ಜೇಸಿ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ

Madhyama Bimba

ಕೈಸ್ಟ್‌ಕಿಂಗ್: ಕ್ರಿಕೆಟ್‌ನಲ್ಲಿ ಪ್ರೌಢಶಾಲಾ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Madhyama Bimba

ಉದ್ಯೋಗ ಮೇಳ ಚುನಾವಣ ಗಿಮಿಕ್ ಆಗದಿರಲಿ – ಯುವ ಜನತೆಯ ನಿರೀಕ್ಷೆ ಹುಸಿಯಾಗದಿರಲಿ: ಶುಭದರಾವ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More