ಕಾರ್ಕಳಹೆಬ್ರಿ

ರಾಷ್ಟ್ರೀಯ ಪಂಚಾಯತ್ ಪುರಸ್ಕಾರ ಅಂತಿಮ ಅರ್ಹತಾ ಸುತ್ತಿಗೆ ನಾಡ್ಪಾಲು ಗ್ರಾಮ ಆಯ್ಕೆ ಹಿನ್ನೆಲೆ ಕೇಂದ್ರ ಅಧಿಕಾರಿಗಳ ಭೇಟಿ

ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಯ ಬಡತನ ಮುಕ್ತ ವಿಭಾಗದಲ್ಲಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾ.ಪಂಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ವಿಕಾಸ್ ಚಿಕಾರ, ಕೆ. ನಾಗೇಶ್ವರ್ ರಾವ್ ಭೇಟಿ ನೀಡಿ ಕ್ಷೇತ್ರ ಪರಿಶೀಲನೆ ನಡೆಸಿದರು.

ಪಂಚಾಯತ್ ಕಛೇರಿಯ ಆಡಳಿತ ವ್ಯವಸ್ಥೆ, ಸುಸ್ಥಿರ ಅಭಿವೃದ್ದಿ, ವಿವಿಧ ವಿನೂತನ ಪ್ರಯೋಗ, ಸಾರ್ವಜನಿಕ ಸಹಭಾಗಿತ್ವ, ಸಾಮಾಜಿಕ, ಆರ್ಥಿಕ ಸೌಲಭ್ಯಗಳ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೀತಲ್ ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ಅಧಿಕಾರಿಯವರನ್ನು ಪಂಚಾಯತ್ ವತಿಯಿಂದ ಗೌರವಿಸಲಾಯಿತು.

ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ, ಜಿ.ಪಂ.ಎಸ್.ಡಿ.ಜಿ ಕೋಶದ ಅನಿಲ್ ಕುಮಾರ್ ಶೆಟ್ಟಿ, ನಾಡ್ಪಾಲು ಗ್ರಾ.ಪಂ ಆಡಳಿತಾಧಿಕಾರಿ ಡಾ.ವಿದ್ಯಾಧರ್ ಹೆಗ್ಡೆ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ದಿನೇಶ್ ಡಿ.ಇ. , ತಾಲೂಕು ಯೋಜನಾಧಿಕಾರಿಯಾದ ಸದಾಶಿವ ಸೇರ್ವೇಗಾರ್, ಕಾರ್ಯದರ್ಶಿ ಶೋಭಾವತಿ, ದೇವಕಿ, ಜಿಲ್ಲಾ ಪಂಚಾಯತ್ ಎಸ್.ಬಿ.ಎಮ್ ಕನ್ಸಲ್ಟೆಂಟ್ ರಘುನಾಥ್, ಮಾಜಿ ಅಧ್ಯಕ್ಷರುಗಳಾದ ದಿನೇಶ್ ಹೆಗ್ಡೆ, ನವೀನ್ ಕುಮಾರ್, ಮಾಜಿ ಉಪಾಧ್ಯಕ್ಷ ಜಗಧೀಶ ಹೇರಳೆ, ಮಾಜಿ ಸದಸ್ಯರುಗಳು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮಸ್ಥರು, ಸಂಜೀವಿನಿ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಎಎನ್‌ಎಫ್, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಕಾರ್ಕಳ ತಾಲೂಕು ಮಟ್ಟದ ಕ್ರೀಡಾಕೂಟ: ಕುಚ್ಚೂರಿನ ರೋಶಿತ್ ಚಾಂಪಿಯನ್

Madhyama Bimba

ಶಿವಪುರ-1 ಶಾಲೆಯಲ್ಲಿ ಯಕ್ಷ ಶಿಕ್ಷಣ ತರಗತಿಗಳ ಉದ್ಘಾಟನೆ ಹಾಗೂ ವಿವಿಧ ಕೊಡುಗೆಗಳ ವಿತರಣೆ

Madhyama Bimba

ದಲಿತ ಸಂಘಟನೆಗಳ ನಾಯಕರಿಂದ ಶಾಸಕರಾದ ವಿ.ಸುನೀಲ್ ಕುಮಾರ್ ರವರಿಗೆ ಮನವಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More