ಮೂಡುಬಿದಿರೆ

ಪುತ್ತಿಗೆಯಲ್ಲಿ ಹಂಡೆಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಪುತ್ತಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಂಡೆಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡುಬಿದಿರೆ ವಲಯ ಹಾಗೂ ಸ. ಹಿ. ಪ್ರಾಥಮಿಕ ಶಾಲೆ ಪುತ್ತಿಗೆ ಇವರ ಸಹಯೋಗದಲ್ಲಿ ನ 4ರಂದು ಪುತ್ತಿಗೆ ಸ. ಹಿ. ಪ್ರಾ. ಶಾಲೆಯಲ್ಲಿ ನಡೆಯಿತು.


ಉದ್ಘಾಟನೆಯನ್ನು ಶಾಲಾ ಕೊಡುಗೈ ದಾನಿ, ಮೂಡುಬಿದಿರೆ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ವಾಸುದೇವ್ ನಾಯಕ್ ರವರು ನೆರವೇರಿಸಿದರು.

ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಕವಿತಾರವರು ವಹಿಸಿದರು.

ಉಪಾಧ್ಯಕ್ಷರಾದ ಸಾಧು ರವರು ಉಪಸ್ಥಿತರಿದ್ದರು.


ಮುಖ್ಯ ಅತಿಥಿಗಳಾದ ಪುತ್ತಿಗೆ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾದ ಭೀಮ ನಾಯ್ಕ್, ವಾದಿರಾಜ್ ಮಡ್ಮಣ್ಣಯ, ಶ್ರೀಮತಿ ವಿದ್ಯಾ ರಮೇಶ್ ಭಟ್, ಶಿಕ್ಷಣ ಸಂಯೋಜಕರಾದ ರಾಜೇಶ್ ಭಟ್, ದಾನಿ ಶ್ರೀಮತಿ ಪ್ರೇಮ ಶೆಟ್ಟಿ, ಶ್ರೀಮತಿ ವಾಣಿಶ್ರೀ, ಶೀನ ನಾಯ್ಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚಂದ್ರಹಾಸ್, ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಮಹೇಶ್ವರಿ, ರಾಮಕೃಷ್ಣ ಶಿರೂರು
ಉಪಸ್ಥಿತರಾ ಗಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮತಿ ನಾಗರತ್ನ ಶಿರೂರು ಮಾಹಿತಿ ನೀಡಿದರು. ಶಾಲಾ ಮುಖ್ಯಪಾಧ್ಯಾರಾದ ಜೋಸೆಫ್ ಮೊಂತೆರೊ ಸ್ವಾಗತಿಸಿ, ಶಾಲಾ ಶಿಕ್ಷಕಿ ಶ್ರೀಮತಿ ಮಮಶ್ರೀ ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀಮತಿ ಅನಿತಾ ವೇಗಸ್ ರವರು ವಂದನಾರ್ಪಣೆ ನೀಡಿದರು. ಶಾಲಾ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಮಮತಾ ಶ್ರೀಮತಿ ಪ್ರತಿಭಾ ಹಾಗೂ ಶಾಲಾ ಎಸ್ ಡಿ ಎಂ ಸಿ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.

Related posts

  ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಕುಮಾರ್ ಪೂಜಾರಿ ಆಕಾಂಕ್ಷಿ

Madhyama Bimba

ಶ್ರೀ ಸಿಂಚನ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

Madhyama Bimba

ಸೈಬರ್ ಅಪರಾಧಗಳ ಕುರಿತು ಜಾಗೃತಿ ಅಗತ್ಯ: ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಕುಮಾರ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More