ಮೂಡುಬಿದಿರೆ ತಾಲೂಕಿನಲ್ಲಿ ಕುಮಾರ್ ಪೂಜಾರಿ ಎಂದರೆ ಎಲ್ಲರಿಗೂ ಚಿರಪರಿಚಿತ ಹೆಸರು. ತಾಲೂಕಿನ ಯಾವುದೇ ಗ್ರಾಮ, ಹಳ್ಳಿಗಳಿಗೆ ಭೇಟಿ ನೀಡಿದರೂ ಅವರನ್ನು ತಿಳಿಯದವರಿಲ್ಲ. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರಾಕ್ಟರ್. ಕುಮಾರ್ ಇಲೆಕ್ಟ್ರಿಕಲ್ ಮಾಲಕ. ಪ್ರವೃತ್ತಿಯಲ್ಲಿ ಸಮಾಜ ಸೇವಕ. ಬಲಗೈಯಲ್ಲಿ ನೀಡಿರುವುದು ಎಡಗೈಗೆ ತಿಳಿಯದಂತೆ ಉಪಚರಿಸುವ ಕೊಡುಗೈ ದಾನಿ. ಹತ್ತಾರು ಸಂಘ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತವರು. ರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷ ಕಾಂಗ್ರೆಸ್ ನಲ್ಲಿ ಎಳೆಯ ಪ್ರಾಯದಿಂದಲೇ ಗುರುತಿಸಿಕೊಂಡವರು. ಎಲೆಮರೆಯ ಕಾಯಿಯಂತೆ ಶ್ರಮಿಸಿದವರು. ಪಂಚಾಯತ್ ನಿಂದ ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯೇ ಇರಲಿ ಕಾರ್ಯಕರ್ತರೊಂದಿಗೆ ಸೇರಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದವರು. ತನ್ನ ಹುಟ್ಟೂರಿನಲ್ಲಿ ಸನ್ಮಿತ್ರರನ್ನೆಲ್ಲಾ ಒಗ್ಗೂಡಿಸಿ ರಾತ್ರಿ ಹಗಲೆನ್ನದೆ ದುಡಿದವರು. ಈವರೆಗೆ ಯಾವುದೇ ಹುದ್ದೆಯನ್ನು ಬಯಸಿದವರಲ್ಲ. ಆದರೆ ಈ ಬಾರಿ ಸ್ಪರ್ಧಿಸಬೇಕೆಂಬ ಹಂಬಲ ತೋರಿದ್ದಾರೆ. ಇದೀಗ ಕಾಂಗ್ರೆಸ್ ಮೂಡುಬಿದಿರೆ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷರಾಗಿಯೂ ಸೇವೆಯಲ್ಲಿ ಮುಂದಿದ್ದಾರೆ. ಅವರಿಗೆ ಪೂರಕವಾಗಿ ಈ ಬಾರಿ ಅವರ ಕಾರ್ಯಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ಗೆ ಹಿಂದುಳಿದ ವರ್ಗ ಎ ಮೀಸಲಾತಿಯು ದೊರೆತಿದೆ. ಬಿಲ್ಲವ ಸಮುದಾಯದ ಕಟ್ಟಾಳು ಆಗಿರುವ ಕುಮಾರ್ ಪೂಜಾರಿಯವರನ್ನು ಚುನಾವಣಾ ಅಖಾಡಕ್ಕೆ ಇಳಿಸಲು ಅವರ ಬೆಂಬಲಿಗ ಪಡೆಯೂ ಸನ್ನದ್ಧವಾಗಿದೆ. ಕುಮಾರ್ ಪೂಜಾರಿಯವರಿಗೆ ಪಕ್ಷ ಈ ಬಾರಿ ಅವಕಾಶ ನೀಡಲೇಬೇಕು ಎಂಬುದು ಅವರ ಬೆಂಬಲಿಗರ ವಾದ. ಕಾಂಗ್ರೆಸ್ ಪಕ್ಷದ ಹಲವು ವರ್ಷಗಳ ಸೇವೆಗೆ ಅವಕಾಶ ದೊರೆತಲ್ಲಿ ಗೆಲುವು ಗ್ಯಾರಂಟಿ ಎಂಬುದು ಅವರ ನಿಲುವು.
previous post
