ಕಾರ್ಕಳ

ಕ್ರೈಸ್ಟ್‌ಕಿಂಗ್ : ಅಥ್ಲೆಟಿಕ್ಸ್‌ನಲ್ಲಿ ಐವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ ಇವರ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಏಳನೇ ತರಗತಿಯ ತ್ರಿಷ್ಮ, ಪ್ರನ್ವಿ ಎಸ್ ದೇವಾಡಿಗ, ಆಶೀ ಶೆಟ್ಟಿ ಹಾಗೂ ಎಂಟನೇ ತರಗತಿಯ ಆಶೆಲ್ ಡಿ ಅಲ್ಮೆಡಾ ಅವರನ್ನೊಳಗೊಂಡ ತಂಡ ಬಾಲಕಿಯರ 4*100ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಹಾಗೂ ಹತ್ತನೇ ತರಗತಿಯ ಅಂಕುಶ್ ಶಾಟ್‌ಪುಟ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

Related posts

ಕಾರ್ಕಳ ಜ್ಞಾನಸುಧಾ: ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಚಟುವಟಿಕೆಗಳ ಉದ್ಘಾಟನೆ

Madhyama Bimba

ಕಾರ್ಕಳ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠಕ್ಕೆ ನೂತನ ಸಂಚಾಲಕರ ಆಯ್ಕೆ

Madhyama Bimba

ಬೈಲೂರು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂತೋಷ್ ಸಾಲ್ಯಾನ್, ಕಾರ್ಯದರ್ಶಿಯಾಗಿ ನಿತಿನ್ ಶೆಟ್ಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More