ಕಾರ್ಕಳಹೆಬ್ರಿ

ಪಡುಕುಡೂರು ಹರೀಶ ಶೆಟ್ಟಿಯವರ ಹುಟ್ಟುಹಬ್ಬ – ಬೃಹತ್ ರಕ್ತದಾನ ಶಿಬಿರ : ಗೋಗ್ರಾಸ ಸಮರ್ಪಣೆ

ಹೆಬ್ರಿ : ಒಳ್ಳೇಯ ಮನಸ್ಸಿನ ಮಾತೃ ಹೃದಯದ ನಮ್ಮೂರಿನ ಉದ್ಯಮಿ ಊರಿನ ಕಣ್ಮಣಿ ಪಡುಪರ್ಕಳ ಹರೀಶ ಶೆಟ್ಟಿಯವರು ಪಡುಕುಡೂರಿನ ಹೆಮ್ಮೆ, ತೆರೆಯಮರೆಯಲ್ಲಿ ನಿಸ್ವಾರ್ಥವಾಗಿ ಬಡವರ ಸೇವೆ ಮಾಡುತ್ತಿರುವ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಮುಂಬಯಿಯಲ್ಲಿ ನೆಲೆಸಿದ್ದರೂ ಹುಟ್ಟೂರಿನ ಬಗೆಗೆ ಅಪಾರವಾದ ಪ್ರೀತಿ ಹೊಂದಿ, ಊರಿನ ಅಭಿವೃದ್ಧಿಗಾಗಿ ಹಲವಾರು ಕನಸು ಕಂಡಿದ್ದಾರೆ ಎಂದು ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನದ ಪ್ರದಾನ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಹೇಳಿದರು.


ಅವರು ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಪ್ರಧಾನ ಸಂಚಾಲಕರಾದ ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಮತ್ತು ಶತಮಾನೋತ್ಸವ ಸಂಭ್ರಮದಲ್ಲಿರುವ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು, ಸಮಾಜ ಸೇವಕ ಮುಂಬೈ ಉದ್ಯಮಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ರಕ್ತದಾನದಿಂದ ನಾವು ಹಲವು ಜೀವವನ್ನು ಉಳಿಸಿದಂತೆ ಹರೀಶ ಶೆಟ್ಟಿಯವರ ಹಬ್ಬದ ಪ್ರಯುಕ್ತ ನಡೆದ ರಕ್ತದಾನ ಹರೀಶ ಶೆಟ್ಟಿ ಅವರ ಫಲಾಪೇಕ್ಷೆಯಿಲ್ಲದೆ ಊರಿಗಾಗಿ ಮಾಡುವ ಸೇವೆಗೆ ನಾವೆಲ್ಲರೂ ನೀಡುವ ದೊಡ್ಡ ಗೌರವ, ಪಡುಕುಡೂರಿನ ಅಭಿವೃದ್ಧಿ ಮತ್ತು ಸೇವೆಯ
ಮೂಲಕ ಪಡುಕುಡೂರಿನ ಹೆಸರನ್ನು ಎತ್ತರಕ್ಕೆ ಏರಿಸಿದ್ದಾರೆ, ಮುಂಬಯಿಯಲ್ಲಿದ್ದರೂ ಸದಾಕಾಲವೂ ಹುಟ್ಟೂರಿನ ಬಗೆಗೆ ಯೋಚಿಸುವ ಅಪರೂಪದ ವ್ಯಕ್ತಿತ್ವ, ನಾವೆಲ್ಲರೂ ಹರೀಶ ಶೆಟ್ಟಿಯವರ ಜೊತೆಗೆ ನಿಂತು ಅವರ ಕೈಯನ್ನು ಬಲಪಡಿಸಬೇಕು ಎಂದು ಸದಾಶಿವ ಉಪಾಧ್ಯಾಯ ಹೇಳಿದರು.

ಮುನಿಯಾಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪಡುಕುಡೂರು ಸುಧಾಕರ ಶೆಟ್ಟಿಯವರು ಮಾತನಾಡಿ ಹರೀಶ ಶೆಟ್ಟಿಯವರ ಹೆಸರಿನಲ್ಲಿ ನಡೆದ ರಕ್ತದಾನ ಕಾರ್ಯ ಅತ್ಯಂತ ಶ್ರೇಷ್ಠ ಕಾರ್ಯ, ಹರೀಶ ಶೆಟ್ಟಿಯವರು ಪಡುಕುಡೂರಿನ ಆಸ್ತಿ ಎಂದು ಶುಭಹಾರೈಸಿದರು.
ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್ ಮಾತನಾಡಿ ಪಡುಕುಡೂರಿನ ಕಣ್ಣುಗಳಾದ ಆಲೆ ಮತ್ತು ದೇವಸ್ಥಾನದ ಜೀರ್ಣೋದ್ಧಾರವನ್ನು ತೆರೆಮರೆಯಲ್ಲೇ ನಿಂತು ಮಾಡಿಸುತ್ತಿರುವ ಹರೀಶ ಶೆಟ್ಟಿಯವರದು ವಿಶೇಷ ವ್ಯಕ್ತಿತ್ವ. ಅವರು ನಮಗೆಲ್ಲರಿಗೂ ಹೆಮ್ಮೆ ಎಂದು ಅಭಿನಂದಿಸಿದರು.

 

ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಪಡುಕುಡೂರು ಮಾತನಾಡಿ ಹರೀಶ ಶೆಟ್ಟಿಯವರು ನಮ್ಮೂರಿನ ಮಾಣಿಕ್ಯ, ಹೃದಯ ಶ್ರೀಮಂತಿಕೆಯ ವ್ಯಕ್ತಿ, ರಕ್ತದಾನವನ್ನು ಮಾಡುವ ಮೂಲಕ ಅವರ ಮೇಲಿನ ಪ್ರೀತಿಯನ್ನು ತೋರಿಸುತ್ತಿದ್ದೇವೆ. ಮಲ್ಲಿಗೆಯ ಗಿಡದಲ್ಲಿ ಮಲ್ಲಿಗೆಯೇ ಆಗುತ್ತದೆ. ಒಳ್ಳೇಯ ತಾಯಿಯ ಹೊಟ್ಟೆಯಲ್ಲಿ ಒಳ್ಳೇಯ ಮಗ ಹುಟ್ಟಿದ್ದಾರೆ ಎಂಬುದಕ್ಕೆ ಸುನಂದ ಸಂಜೀವ ಶೆಟ್ಟಿ ಸಾಕ್ಷಿಯಾಗಿದ್ದಾರೆ ಎಂದರು.

ಬಡವರ ಬಂಧು ಹರೀಶ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ಕುಟುಂಬಸ್ಥರಿಂದ ಊರಿನ ಶ್ರೀ ಭದ್ರಕಾಳಿ ಅಮ್ಮನವರ ದೇವಸ್ಥಾನದಲ್ಲಿ ಹೂವಿನ ಪೂಜೆ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ಬಳಿಕ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ಸಹಕಾರದಲ್ಲಿ ಬೃಹತ್ ರಕ್ತದಾನ ಶಿಬಿರ, ಅನ್ನದಾನ, ಖಜಾನೆ ದೇವಿಪ್ರಸಾದ ಗೋಶಾಲೆಗೆ ಗೋಗ್ರಾಸ ಸಮರ್ಪಣೆ ನಡೆಯಿತು.
ಹರೀಶ್ ಶೆಟ್ಟಿ ಅಭಿಮಾನಿಗಳು, ಸ್ಥಳೀಯ ಗಣ್ಯರು, ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು, ಶಿಕ್ಷಕಿಯರು, ಶಾಲಾಭಿವೃದಧಿ ಸಮಿತಿಯ ಸದಸ್ಯರು, ಸೇರಿ ನೂರಾರು ಮಂದಿ ಭಾಗವಹಿಸಿದ್ದರು. ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಯೂತ್ ಕ್ಲಬ್ ಅಧ್ಯಕ್ಷ ಸಂದೀಪ್‌ಶೆಟ್ಟಿ ಪಟೇಲರಮನೆ ಪಡುಕುಡೂರು ನೇತ್ರತ್ವದಲ್ಲಿ ವಿವಿಧ ಪ್ರಮುಖರು, ಅಭಿಮಾನಿಗಳ ಸಹಕಾರದಲ್ಲಿ ಹುಟ್ಟುಹಬ್ಬದ ವಿಶೇಷ ಕಾರ್ಯಕ್ರಮ ನಡೆಯಿತು.

ಹರೀಶ ಶೆಟ್ಟಿ ಅವರ ತಾಯಿ ಸುನಂದ ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ಡಾ.ಸ್ನೇಹಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ವಿವಿಧ ಪ್ರಮುಖರಾದ ಸುಧಾಕರ ಶೆಟ್ಟಿ ಕೆಳಮನೆ, ಶಂಕರ ಶೆಟ್ಟಿ ಪಡುಪರ್ಕಳ, ಶಿವರಾಯ ಶೆಟ್ಟಿ ಪಡುಪರ್ಕಳ, ಉದಯ ಪೂಜಾರಿ ತಿಮ್ಮೋಟ್ಟು, ಸೂರಾಜ್ ಬಲ್ಲಾಳ್, ಭಾರವಿ ಶೆಟ್ಟಿ, ರಕ್ಷಣ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಹರೀಶ್ ಪೂಜಾರಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

Related posts

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್ ಪ್ರವೇಶಾತಿ: ಅರ್ಜಿ ಆಹ್ವಾನ

Madhyama Bimba

ಪುರಸಭೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿ ತಕ್ಷಣ ಕ್ರಮಕ್ಕೆ ಆಗ್ರಹ : ಶಾಸಕರ ಮೌನಕ್ಕೆ‌ ಆಕ್ರೋಶ ನಮ್ಮೂರಿಗೂ ಒಬ್ಬ ಜನಪರ ಕಾಳಜಿಯ ಶಾಸಕ ಬೇಕಿತ್ತು- ಶುಭದರಾವ್

Madhyama Bimba

ಹೆಬ್ರಿಯಲ್ಲಿ ಗೋಪಾಲ ಭಂಡಾರಿ ೭೫ನೇ ಜನ್ಮ ದಿನಾಚರಣೆ : ಸಾಧಕರ ಸನ್ಮಾನ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ. 

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More