ಕಾರ್ಕಳ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯಾ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯು ಅ. 3ರಿಂದ ಅ. 12ರ ತನಕ ನವರಾತ್ರಿ ಪೂಜೆಯು ವಿಜೃಂಭಣೆಯಿಂದ ನಡೆಯಲಿದೆ.
ಅ.3 ರಂದು ಗುರುರಾಜ್ ತಂತ್ರಿ, ಬೋಳ ಮತ್ತು ಸುದೀಶ್ ಭಟ್ ಇವರ ನೇತೃತ್ವದಲ್ಲಿ ಬೆಳಗ್ಗೆ ಸ್ಥಳ ಶುದ್ಧಿ, ಗಣಹೋಮ, ನವಕ ಪ್ರಧಾನ ಹೋಮ ಜರುಗಲಿದ್ದು ಮಧ್ಯಾಹ್ನ 12ಗಂಟೆಗೆ ಕಲಶ ಪ್ರತಿಷ್ಠಾಪನೆ ನಡೆಯಲಿದೆ. ಅ. 8 ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಚಂಡಿಕಾಯಾಗ ಮತ್ತು ಶ್ರೀ ಕಾಳಿ ಸಹಸ್ರನಾಮಯಾಗ ಮತ್ತು ಅನ್ನ ಸಂತರ್ಪಣೆ ನಡೆಯಲಿರುವುದು. ಅ.12 ರ ಶನಿವಾರ ಸಂಜೆ 5ಗಂಟೆಗೆ ಶ್ರೀ ದೇವಿ ಮತ್ತು ಪರಿವಾರ ದೇವರಿಗೆ ನವರಾತ್ರಿಯ ವಿಶೇಷ ಪುಷ್ಪಾಂಲಕಾರ ಪೂಜೆ ಹಾಗೂ ಸಾರ್ವಜಕ ಅನ್ನ ಸಂತರ್ಪಣೆ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ 7:30 ಕ್ಕೆ, ಮಧ್ಯಾಹ್ನ 12:30 ಕ್ಕೆ ರಾತ್ರಿ 7:30 ಕ್ಕೆ ಪೂಜೆಯು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದ್ದು ನವರಾತ್ರಿಯಲ್ಲಿ ಪ್ರತಿದಿನ ರಾತ್ರಿ ಪೂಜೆಯ ನಂತರ ಅನ್ನ ಸಂತರ್ಪಣೆಯು ಜರಗಲಿರುವುದು. ಹಾಗೂ ಪ್ರತಿದಿನ ಸಂಜೆ 5:30ರಿಂದ 7:30ರವರೆಗೆ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವು ನಡೆಯಲಿರುವುದು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಆಡಳಿತ ಮೊಕೇಸ್ತರರಾದ ಕೆ. ದಿವಾಕರ ಶೆಟ್ಟಿ ತಿಳಿಸಿದ್ದಾರೆ.