ಕಾರ್ಕಳ

ಗಾಂಧಿ ಜಯಂತಿ ಪ್ರಯುಕ್ತ ಕೆಕೆಎಂಪಿಯಿಂದ ಪ್ರಯಾಣಿಕರ ತಂಗುದಾಣ ಸ್ವಚ್ಛತಾ ಕಾರ್ಯಕ್ರಮ

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಕಾರ್ಕಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಕರಿಯ ಕಲ್ಲು ಹಿಂದೂ ರುದ್ರ ಭೂಮಿ ವ್ಯವಸ್ಥಾಪನಾ ಸಮಿತಿ ಹಾಗೂ ಪಲ್ಲವಿ ಡೆಕೋರೇಟರ್ಸ್ ಕಾರ್ಕಳ ಇವರ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕಾರ್ಕಳ ನಗರ ವ್ಯಾಪ್ತಿಯಲ್ಲಿರುವ 13 ಪ್ರಯಾಣಿಕರ ತಂಗುದಾಣ ಸ್ವಚ್ಚತಾ ಕಾರ್ಯಕ್ರಮಕ್ಕೆ ಹಿರಿಯ ವಕೀಲ ಎಂ ಕೆ ವಿಜಯ್ ಕುಮಾರ್ ಚಾಲನೆ ನೀಡಿದರು.


ಆನೆಕೆರೆ, ಕುಂಟಲ್ಪಾಡಿ, ಪುಲ್ಕೇರಿ ಬೈಪಾಸ್, ಕರಿಯಕಲ್ಲು, ಜೋಡುಕಟ್ಟೆ, ದಾನಶಾಲೆ, ಅನಂತಶಯನ, ಬಂಡೀಮಠ, ಕಾಬೆಟ್ಟು ಮುಂತಾದ ಕಡೆಗಳಲ್ಲಿರುವ ಪ್ರಯಾಣಿಕರ ತಂಗುದಾಣಗಳನ್ನು ಸ್ವಚ್ಛಗೊಳಿಸಲಾಯಿತು.


ಕೆ ಕೆ ಎಂ ಪಿ ಉಡುಪಿ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಕಾರ್ಯದರ್ಶಿ ಸಂತೋಷ್ ರಾವ್, ಕಾರ್ಕಳ ತಾಲೂಕು ಅಧ್ಯಕ್ಷ ಕೀರ್ತನ್ ಕುಮಾರ್, ಕಾರ್ಯದರ್ಶಿ ಹರೀಶ್ ರಾವ್, ಕೋಶಾಧಿಕಾರಿ ಸತೀಶ್ ರಾವ್, ಸುಧಾಕರ್ ರಾವ್, ಪಲ್ಲವಿ ಡೆಕೋರೇಟರ್ಸ್ ನ ಮಾಲೀಕ ಉದ್ಯಮಿ ಸುರೇಶ್ ಕೋಟ್ಯಾನ್, ರಾಜೇಶ್, ಪಲ್ಲವಿ, ಅನಿಕಾ, ಪೂರ್ವಿ, ನಿಖಿಲ್, ಕಾರ್ತಿಕ್, ಪವನ್, ರಾಘವೇಂದ್ರ, ವಿಘ್ನೇಶ್, ಅಮೋಘ್, ನೀಲ್, ಕಿಯಾನ್ ಮತ್ತಿತರರು ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು.

Related posts

ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ಮಾದಕ ವಸ್ತು ವಿರೋಧಿ ದಿನ ಹಾಗೂ ನಶಾ ಮುಕ್ತ ಭಾರತ ಅಭಿಯಾನ

Madhyama Bimba

ಕಾರ್ಕಳ ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾದ ವಾರ್ಷಿಕ ಮಹಾಸಭೆ

Madhyama Bimba

ಮಾಜಿ ಶಾಸಕ ಹೆಚ್ ಗೋಪಾಲ್ ಭಂಡಾರಿಯವರ 7ನೇ ಪುಣ್ಯಸ್ಮರಣೆ- ರಕ್ತದಾನ ಮತ್ತು ಸಹಾಯಧನ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More