ಮೂರ್ತೆದಾರರ ಸೇವಾ ಸಹಕಾರ ಸಂಘ (ನಿ) ಹಿರ್ಗಾನ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಭಾಭವನದಲ್ಲಿ ಜರುಗಿತು.
ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಇಷ್ಟು ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರೆ ಅದು ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಸಾಧ್ಯ. ಸಂಘವನ್ನು ಇನ್ನು ಹೆಚ್ಚು ಸದೃಢಗೊಳಿಸುವಲ್ಲಿ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಹಾಗೂ ನಿಮ್ಮ ಸಹಕಾರಕ್ಕಾಗಿ ನಮ್ಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗ ಸದಾ ನಿಮ್ಮ ಜೊತೆಗಿರುತ್ತೇವೆ . ಸಂಘದ ಬೆಳವಣಿಗೆಯಲ್ಲಿ ನಾವೆಲ್ಲರೂ ಶ್ರಮಿಸಿ ಇನ್ನೂ ಹೆಚ್ಚು ಲಾಭ ಗಳಿಸುವಲ್ಲಿ ನಮ್ಮ ಸಂಘ ಮುಂದುವರಿಯಲಿ ಎಂದು ಹಾರೈಸಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂತೋಷ್‌ರವರು ಆರ್ಥಿಕ ವರ್ಷದ ವರದಿ ಮಂಡಿಸಿ ಸಂಘದ ಪಾಲು ಬಂಡವಾಳ 41.74 ಲಕ್ಷ, ಠೇವಣಿ 8.02ಕೋಟಿ ರೂ., ಸ್ವಂತ ನಿಧಿ 71.15ಲಕ್ಷ, ಹೊರಬಾಕಿ ಸಾಲಗಳು 6.70ಕೋಟಿ ರೂ. ಹೊಂದಿ, 9.80ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ. 10ಡಿವಿಡೆಂಟ್ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ವತಿಯಿಂದ 22ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಏಷ್ಯಾನ್ ತ್ರೋಬಾಲ್ ಚಾಂಪಿಯನ್ ಶಿಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ರೆಂಜಾಳದ ಕು. ರಕ್ಷಾ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಹಿರ್ಗಾನದ ಪಾಲಿಟೆಕ್ನಿಕಲ್ ವಿದ್ಯಾರ್ಥಿ ರಿತಿಕ್ ಅಂಚನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಮುಖೇನ ಕಾರ್ಯನಿರ್ವಹಿಸುತ್ತಿರುವ 2 ಸ್ವಸಹಾಯ ತಂಡಗಳಿಗೆ ಒಟ್ಟು ರೂ. 1,56,600 ಲಾಭಾಂಶದ ಚೆಕ್ ವಿತರಿಸಲಾಯಿತು. ಅಲ್ಲದೇ ಸಂಘದ ಅತ್ಯುತ್ತಮ ತಂಡವೆಂದು ಶ್ರೀ ದುರ್ಗಾಪರಮೇಶ್ವರಿ ಸ್ವಸಹಾಯ ತಂಡದ ಪ್ರಬಂಧಕ ಸಂಯೋಜಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಭಾಸ್ಕರ ಸಿ. ಕೋಟ್ಯಾನ್ ಹಾಗೂ ನಿರ್ದೇಶಕರಾದ ಆನಂದ ಪೂಜಾರಿ, ಬಾಬು ಪೂಜಾರಿ, ಸೋಮಪ್ಪ ಪೂಜಾರಿ, ನಾರಾಯಣ ಪೂಜಾರಿ, ಉದಯ ಪೂಜಾರಿ ಹಾಗೂ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಸತೀಶ್ ಪೂಜಾರಿ ಸ್ವಾಗತಿಸಿ, ಅಮಿತಾ ಸಿರೂಪಿಸಿದರು. ಹರಿಣಿ ವಂದಿಸಿದರು.