ಕಾರ್ಕಳ: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾ.ಪಂ ವ್ಯಾಪ್ತಿಯ ವಿವಿಧ ಭಾಗದಲ್ಲಿ ಸಂಭವಿಸಿದ ಮಹಾಸ್ಪೋಟ ಪ್ರವಾಹ ಪೀಡಿತಕ್ಕೊಳಗಾಗಿ ಹಾನಿಗೊಂಡ ಪ್ರದೇಶಗಳಿಗೆ ಶಾಸಕ ವಿ. ಸುನಿಲ್ ಕುಮಾರ್ ಸೋಮವಾರ ಭೇಟಿ ನೀಡಿದರು.
ಭೇಟಿ ವೇಳೆ ಸಂತ್ರಸ್ಥ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಹಾನಿಗೊಳಗಾದ ಮನೆ ಹಾಗೂ ಕೃಷಿ ಭೂಮಿ ಪರಿಶೀಲನೆ ನಡೆಸಿ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಂತ್ರಸ್ಥ ಕುಟುಂಬಗಳಿಗೆ ತತ್ ಕ್ಷಣಕ್ಕೆ ಪರಿಹಾರ ಮಂಜೂರಿಗೆ ಕ್ರಮವಹಿಸಲು, ಹಾನಿಗೊಳಗಾದ ರಸ್ತೆ ಮರು ನಿರ್ಮಾಣ ಇತ್ಯಾದಿ ದುರಸ್ತಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ, ತೋಟಗಾರಿಗೆ ಸಂಭಂದಿಸಿ ಹೆಚ್ಚು ನಷ್ಟ ಉಂಟಾಗಿದ್ದು ನಷ್ಡ ಅಂದಾಜು ಪಟ್ಟಿ ಸಿದ್ದ ಪಡಿಸುವಂತೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖಾದಿಕಾರಿಗಳಿಗೆ ಸೂಚಿಸಿದರು.