ಕಾರ್ಕಳಹೆಬ್ರಿ

ಉಡುಪಿ : ಗೀತಾಂಜಲಿ ಪುರುಷರ ವಸ್ತ್ರ ಮಳಿಗೆ ಉದ್ಘಾಟನೆ

ಉಡುಪಿ: ಕಳೆದ ನಾಲ್ಕು ದಶಕಗಳಿಂದ ಜವಳಿ ವ್ಯವಹಾರದಲ್ಲಿ ಮನೆಮಾತಾಗಿರುವ ಆರ್‌ಕೆ ಸಹೋದರು ಇದೀಗ ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ತಮ್ಮ ಗೀತಾಂಜಲಿ ಸಿಲ್ಕ್ಸ್ ನಲ್ಲಿ ನೂತನವಾಗಿ ಆರಂಭಿಸಿರುವ ಪುರುಷರ ಪ್ರತ್ಯೇಕ ವಿಭಾಗವನ್ನು ಬುಧವಾರ ಗ್ರಾಹಕರಿಂದಲೇ ಉದ್ಘಾಟಿಸಲಾಯಿತು.

ಉದ್ಯಮಿ ಡಾ.ಜಿ ಶಂಕರ್ ಮಾತನಾಡಿ, ಸಣ್ಣ ಅಂಗಡಿಯ ಮೂಲಕ ಸತತ ಪರಿಶ್ರಮ, ಶ್ರದ್ದೆಯಿಂದ ದುಡಿಯುತ್ತಾ, ಪ್ರಸ್ತುತ ಜಿಲ್ಲೆಯಲ್ಲಿಯೇ ಬೃಹತ್ ವಸ್ತ್ರ ವೈವಿಧ್ಯಗಳ ಮಳಿಗೆಯನ್ನು ತೆರೆಯುವ ಸಾಧನೆ ಮಾಡಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ, ಗುಣಮಟ್ಟದ ವಸ್ತ್ರ ವಿನ್ಯಾಸಗಳನ್ನು ನೀಡಿದಾಗ ವ್ಯಾಪಾರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಶುಭ ಹಾರೈಸಿದರು.

ಮಾಂಡೋವಿ ಬಿಲ್ಡರ್ಸ್ ನ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡಿ, ನಾಲ್ಕು ದಶಕಗಳ ಹಿಂದೆ ಗುಣಮಟ್ಟದ ವಸ್ತ್ರಗಳ ಖರೀದಿಗೆ ದೂರದ ಪಟ್ಟಣಗಳಿಗೆ ತೆರಳಬೇಕಿತ್ತು. ಆದರೆ ಪ್ರಸ್ತುತ, ಗೀತಾಂಜಲಿ ಸಿಲ್ಕ್ಸ್ ನಲ್ಲಿ ಉಡುಗೆ ತೊಡುಗೆಗಳು ಲಭ್ಯವಿದೆ ಎಂದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಪ್ರಮುಖರಾದ ಡಾ. ರವಿರಾಜ್ ಆಚಾರ್ಯ, ಶ್ರೀಶ ನಾಯಕ್ ಪೆರ್ಣಂಕಿಲ, ಅಂಡಾರು ದೇವಿ ಪ್ರಸಾದ್ ಶೆಟ್ಟಿ, ನೈನಾ ಫ್ಯಾನ್ಸಿ ಮಾಲಕ ಮಹಮ್ಮದ್ ಮೌಲಾ, ಮಲಬಾರ್ ಗೋಲ್ಡ್ ಹಫೀಝ್ ರೆಹಮಾನ್, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ನಾರಾಯಣ ಸರಳಾಯ ಶುಭ ಹಾರೈಸಿದರು.

ಗ್ರಾಹಕ ಪ್ರಮುಖರಾದ ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಶಕುಂತಲಾ ಮಣಿಪಾಲ, ಧನರಾಜ್, ಅಮಿತಾ ವಾಸು ರಾಜಸ್ಥಾನ, ಮಾಲತಿ ತೀರ್ಥಹಳ್ಳಿ, ಕಿಶನ್ ಪ್ರಭು ಪಳ್ಳಿ, ಪ್ರದೀಪ್ ನಾಯಕ್ ನೀರೆ, ಪ್ರಶಾಂತ್ ಅಂಬಲಪಾಡಿ, ಇಬ್ರಾಹಿಂ ಉಚ್ಚಿಲ, ನಾರಾಯಣ ಶೆಣೈ, ಕೃಷ್ಣಮೂರ್ತಿ, ಸತ್ಯಾನಂದ ನಾಯಕ್, ಉಪೇಂದ್ರ ಶೆಣೈ ಮಣಿಪಾಲ, ರಘುರಾಮ ಪ್ರಭು ಎಣ್ಣೆಹೊಳೆ, ಜಯರಾಂ ಕಾರ್ಕಳ, ಪ್ರಕಾಶ್ ಪ್ರಭು, ರತ್ನಾಕರ ಪೆರ್ಡೂರು, ಆಸಿಫ್, ನಿತ್ಯಾನಂದ ನಾಯಕ್, ಸಂಸ್ಥೆಯ ಪಾಲುದಾರರಾದ ಲಕ್ಷ್ಮಣ ನಾಯಕ್, ರಮೇಶ್ ನಾಯಕ್, ಹರೀಶ್ ನಾಯಕ್ ಕುಟುಂಬಸ್ಥರು, ಸಿಬ್ಬಂದಿ, ಹಿತೈಷಿಗಳು, ಗ್ರಾಹಕರು ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಕರಾವಳಿ ಕರ್ನಾಟಕದ ಅತೀ ವಿಶಾಲವಾದ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಈಗಾಗಲೇ ಮಹಿಳೆಯರ ಮತ್ತು ಮಕ್ಕಳ ಬಟ್ಟೆಗಳ ಪ್ರತ್ಯೇಕ ಮಹಡಿಗಳನ್ನು ಹೊಂದಿದ್ದು, ಇದೀಗ ಒಂದನೇ ಮಹಡಿಯಲ್ಲಿ ಪುರುಷರ ಸ್ವದೇಶಿ ಮತ್ತು ವಿದೇಶದ ೨೨ಕ್ಕೂ ಅಧಿಕ ಬ್ರ್ಯಾಂಡ್‌ಗಳ ಮಳಿಗೆ ಶುಭಾರಂಭಗೊಂಡಿತು.

ಈ ಮಹಡಿಯಲ್ಲಿ ಮದುವೆ ಇತ್ಯಾದಿ ಧಾರ್ಮಿಕ ಸಮಾರಂಭಗಳಿಗೆ ಅಗತ್ಯವಿರುವ ಪಾರಂಪರಿಕ ಮತ್ತು ಆಧುನಿಕ ಶೈಲಿಯ ಬಟ್ಟೆಗಳು, ಆಫೀಸ್ ವೇರ್, ಡೈಲಿ ವೇರ್, ಕ್ಯಾಶುವಲ್ ವೇರ್, ಪಾರ್ಟಿ ವೇರ್ ಇತ್ಯಾದಿಗಳ ವಿಫುಲ ಸಂಗ್ರಹವನ್ನಡಲಾಗಿದೆ. ಅಲ್ಲದೇ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಸೂಟಿಂಗ್ಸ್ – ಶರ್ಟಿಂಗ್ಸ್ ಜೊತೆಗೆ ಒಳಉಡುಪುಗಳು ಲಭ್ಯವಿದೆ.


ಸುಮಾರು 15 ಸಾವಿರ ಚದರಡಿ ವಿಸ್ತೀರ್ಣದ ಈ ಮಹಡಿಯಲ್ಲಿ ದೇಶಿ ಮತ್ತು ವಿದೇಶಿ ಬ್ರ್ಯಾಂಡ್ ಗಳ ಪ್ರತ್ಯೇಕ ವಿಭಾಗಗಳಿವೆ. ಅಲ್ಲದೇ ಪೀಟರ್ ಇಂಗ್ಲೆಡ್, ಲಿನನ್ ಕ್ಲಬ್, ಕಿಲ್ಲರ್, ಫ್ಲೈಯಿಂಗ್ ಮೇಶಿನ್, ಅಲನ್ ಸೂಲಿ, ವ್ಯಾನ್ ಹುಸೇನ್, ಲೂಯಿಸ್ ಪಿಲಿಪ್, ಜಾನ್ ಪ್ಲೇಯರ್, ಲೆವಿಸ್ ಇತ್ಯಾದಿ ಬ್ರ್ಯಾಂಡ್ ಗಳ ಫಾರ್ಮಲ್, ಜೀನ್ಸ್ ಬಟ್ಟೆಗಳು ಲಭ್ಯ ಇವೆ ಎಂದು ಸಂಸ್ಥೆಯ ಪಾಲುದಾರ ಸಂತೋಷ್ ವಾಗ್ಲೆ ಗ್ರಾಹಕರಿಗೆ ವಿವರಣೆ ನೀಡಿದರು.
ಪಾಲುದಾರ ಸಂತೋಷ್ ವಾಗ್ಲೆ ಸ್ವಾಗತಿಸಿ, ರಾಮಕೃಷ್ ನಾಯಕ್ ವಂದಿಸಿದರು. ನಿಖಿತಾ ಎರ್ಲಪಾಡಿ ಕಾರ್ಯಕ್ರಮ ನಿರೂಪಿಸಿದರು

Related posts

ಕಾರ್ಕಳದಲ್ಲಿ ಅಂದರ್ – ಬಾಹರ್ ಇಸ್ಪೀಟ್ ಜೂಜಾಟ: ಬಂಧನ

Madhyama Bimba

ಕ್ರೈಸ್ಟ್‌ಕಿಂಗ್: ಸಂಭ್ರಮ ಸಡಗರದೊಂದಿಗೆ ಅದ್ದೂರಿಯಾಗಿ ನಡೆದ ‘ಮಕ್ಕಳ ಹಬ್ಬ’

Madhyama Bimba

ಡಾ. ಎಂ. ವೀರಪ್ಪ ಮೊಯಿಲಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More