ಹೆಬ್ರಿ ಸಮೀಪದ ಮುದ್ರಾಡಿ ಶ್ರೀ ಗುರುರಕ್ಷಾದ ಆವರಣದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮುದ್ರಾಡಿ ವತಿಯಿಂದ ಶುಕ್ರವಾರ ನಡೆದ 5ನೇ ವರ್ಷದ ಶ್ರೀ ಶಾರದೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಮುದ್ರಾಡಿ ಶಾರದೋತ್ಸವದಲ್ಲಿ ಪೂಜಿಸಿದ ಶಾರದೆ.
ಹೆಬ್ರಿ ಸಮೀಪದ ಮುದ್ರಾಡಿ ಶ್ರೀ ಗುರುರಕ್ಷಾದ ಆವರಣದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮುದ್ರಾಡಿ ವತಿಯಿಂದ ಶುಕ್ರವಾರ ನಡೆದ ೫ನೇ ವರ್ಷದ ಶ್ರೀ ಶಾರದೋತ್ಸವ ಸಂಭ್ರಮದಲ್ಲಿ ನಡೆಯಿತು.
ಮುದ್ರಾಡಿ 4ನೇ ವರ್ಷದ ಮುದ್ರಾಡಿ ಶಾರದೋತ್ಸವ ಸಂಭ್ರಮ : ಸಾಧಕರ ಸನ್ಮಾನ : ವೈಭವದ ಪುರ ಮೆರವಣಿಗೆ.
ಸರ್ಕಾರಿ ಶಾಲೆಗಳು ವೈಭವದಿಂದ ಮೆರೆಯಬೇಕು : ಹೆಬ್ರಿ ಸತೀಶ್ ಪೈ
– ಸುಕುಮಾರ್ ಮುನಿಯಾಲ್
ಹೆಬ್ರಿ : ಅಂದು ನಾವೆಲ್ಲ ಸರ್ಕಾರಿ ಶಾಲೆಯಲ್ಲೇ ಕಲಿತು ಮುಂದೆ ಬಂದಿದ್ದೇವೆ. ಆದರೆ ಈಗ ಖಾಸಗಿ ಶಾಲೆಗಳ ಪೈಪೋಟಿಯಿಂದ ಬಡವರು ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ. ಸ್ಥಿತಿವಂತರೂ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯವನ್ನು ಒದಗಿಸುವ ಮೂಲಕ ಶಾಲೆಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು. ಹಿಂದಿನ ಕಾಲದ ಸರ್ಕಾರಿ ಶಾಲೆಗಳ ವೈಭವ ಮತ್ತೇ ಕಾಣಬೇಕು, ಹೀಗೆ ಮಾಡಿದಾಗ ಮಾತ್ರ ತಾಯಿಯ ಸೇವೆ, ಸರಸ್ವತಿ ವಿದ್ಯಾದೇವತೆಯ ಸೇವೆ ಮಾಡಿದ ಸಂತೃಪ್ತಿ ದೊರೆಯುತ್ತದೆ ಹೆಬ್ರಿ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ರೂವಾರಿ ಉದ್ಯಮಿ ಎಚ್. ಸತೀಶ್ ಪೈ ಹೇಳಿದರು.
ಅವರು ಮುದ್ರಾಡಿ ಶ್ರೀ ಗುರುರಕ್ಷಾದ ಆವರಣದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮುದ್ರಾಡಿ ವತಿಯಿಂದ ಶುಕ್ರವಾರ ನಡೆದ ೫ನೇ ವರ್ಷದ ಶ್ರೀ ಶಾರದೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾರದೋತ್ಸವ ಸಂಭ್ರಮದಲ್ಲಿ ಕಲೆ ಮತ್ತು ಸಾಹಿತ್ಯದ ಸಂಗಮ ಆದಾಗ ಮಾತ್ರ ಅರ್ಥಪೂರ್ಣವಾಗುತ್ತದೆ. ಆ ಕಾರ್ಯ ಮುದ್ರಾಡಿಯ ಶಾರದೋತ್ಸವದಲ್ಲಿ ನಡೆಯುತ್ತದೆ. ಶಿಕ್ಷಣ ಮತ್ತು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ ಮುದ್ರಾಡಿ ಶಾರದೋತ್ಸವ ನಡೆಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಸತೀಶ ಪೈ ಹೇಳಿದರು.
ಗಣೇಶೋತ್ಸವ ಕನ್ನಡಿಗರ ನಾಡ ಹಬ್ಬ ಅಲ್ಲ : ಗಣೇಶೋತ್ಸವ ನಮ್ಮ ನಾಡಿನ ನಾಡ ಹಬ್ಬ ಅಲ್ಲ, ನವರಾತ್ರಿ ನಮ್ಮ ಕನ್ನಡಿಗರ ನಾಡ ಹಬ್ಬ, ವೈವಿಧ್ಯತೆಯಲ್ಲಿ ಮುದ್ರಾಡಿಯಲ್ಲಿ ಮುದ್ರಾಡಿ ಶಾರದೋತ್ಸವ ಸಂಭ್ರಮದಲ್ಲಿ ನಡೆಯುತ್ತಿರುವುದು ಹೆಮ್ಮೆ. ಜೀವನ ಹೇಗೆ ಎಂಬುದನ್ನು ತಾಯಿ ಶಾರದೆ ತೋರಿಸುತ್ತಾಳೆ. ಅಮ್ಮ ಗ್ರೇಟ್ ಎಂಬುದಕ್ಕೆ ಶಿಕ್ಷಣ ಪಡೆದು ಶ್ರಮಪಟ್ಟರೆ ಬದುಕು ಸಾರ್ಥಕ ಎಂಬುದಕ್ಕೆ ಶಾರದೆ ಸರ್ವರಿಗೂ ಮಾದರಿಯಾಗುತ್ತಾಳೆ, ಇದಕ್ಕೆ ಶಾರದೆಯ ವಾಹನ ಮತ್ತು ಕೈಯಲ್ಲಿರುವ ಆಯುಧಗಳು ಸಾಕ್ಷಿ ಎಂದು ಸಂಪನ್ಮೂಲ ವ್ಯಕ್ತಿಯಾಗಿರುವ ಚಿಂತಕ ಮುನಿರಾಜ ರೆಂಜಾಳ ಹೇಳಿದರು.
ಮುದ್ರಾಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾರದೋತ್ಸವ ಸಂಭ್ರಮದ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಗಣ್ಯರು, ವಿವಿಧ ಕ್ಷೇತ್ರದ ಸಾಧಕರ ಸನ್ಮಾನ, ಮುದ್ರಾಡಿ ಶಾರದೋತ್ಸವ ಪುರಸ್ಕಾರ 2024 ಪ್ರಧಾನ ಮತ್ತು ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಮುದ್ರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಸಂತಿ ಪೂಜಾರಿ, ಕಾಡುಹೊಳೆಯ ಉಧ್ಯಮಿ ಮಂಜುನಾಥ ಕೆ, ಹೆಬ್ರಿ ಎಸ್. ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಎಚ್. ನಾಗರಾಜ ಶೆಟ್ಟಿ, ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಜಗದೀಶ್ ಜರ್ವತ್ತು, ಉಡುಪಿಯ ಉದ್ಯಮಿ ತಾರಾನಾಥ ಕೋಟ್ಯಾನ್, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಆಚಾರ್ಯ, ಸಮಾಜಸೇವಕ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಮುದ್ರಾಡಿ, ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಬಾಯರಿ, ಶಾರದೋತ್ಸವ ಸಮಿತಿ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ಡ್ರಾಮ ಜ್ಯೂನಿಯರ್ ಸೀಸನ್ ೫ ವಿಜೇತೆ ರಿಷಿಕಾ ಕುಂದೇಶ್ವರ ಅವರಿಂದ ಕಾರ್ಯಕ್ರಮ ವೈವಿಧ್ಯ ಸೇರಿದಂತೆ ಶಾರದೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಿತು.
ಚೈತ್ರ ಕಬ್ಬಿನಾಲೆ, ಮಾತಿಬೆಟ್ಟು ಪ್ರಕಾಶ ಪೂಜಾರಿ, ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿ ಕಬ್ಬಿನಾಲೆ ಚಂದ್ರಶೇಖರ ಬಾಯರಿ ವಂದಿಸಿದರು.