Blog

ಬಸ್ರಿ ಶಾಲೆಯಲ್ಲಿ ಒಂದು ಗಿಡ ಹೆತ್ತವರೊಂದಿಗೆ

🔴ಬಸ್ರಿ ಶಾಲೆಯಲ್ಲಿ ‘ಒಂದು ಗಿಡ ಹೆತ್ತವರೊಂದಿಗೆ’ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ


ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘ ಹಾಗೂ ರೋಟರಿ ಕ್ಲಬ್ ಕಲ್ಯಾಣ್‌ಪುರ ಇವರ ಜಂಟಿ ಆಶ್ರಯದಲ್ಲಿ ಒಂದು ಗಿಡ ಹೆತ್ತವರೊಂದಿಗೆ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವು ಜೂ. 15ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ವಿದ್ಯಾರ್ಥಿಗಳೊಂದಿಗೆ ನಡೆಯಿತು.


ಶಾಸಕರಾದ ವಿ. ಸುನಿಲ್ ಕುಮಾರ್ ಹಣ್ಣಿನ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗಿಡ ವಿತರಿಸಿ ಮಾತನಾಡಿ ಪ್ರಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಳೆ ವಿದ್ಯಾರ್ಥಿ ಸಂಘವು ಮಕ್ಕಳಲ್ಲಿ ಪ್ರಕೃತಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವೆಂದರು.


ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ವಸಂತ ಕುಲಾಲ್ ವಹಿಸಿದ್ದರು.


ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿಶಿರ್ ಶೆಟ್ಟಿ, ಕಲ್ಯಾಣ್‌ಪುರ ರೋಟರಿ ಕ್ಲಬ್ ಅಧ್ಯಕ್ಷರಾದ ನ್ಯಾಯವಾದಿ ಗಿರೀಶ್ಚಂದ್ರ ಆರ್., ಕಣಂಜಾರು ಹೊಸಬೆಳಕು ಆಶ್ರಮದ ತನುಲಾ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಸದಾನಂದ ಸಾಲಿಯಾನ್, ಕೋಶಾಧಿಕಾರಿ ರಾಮದಾಸ್ ಶೆಟ್ಟಿ, ಹಿರಿಯರಾದ ಕರುಣಾಕರ ಹೆಗ್ಡೆ, ಕಮಲಾಕ್ಷ ನಾಯಕ್ ಜಾರ್ಕಳ, ಸತೀಶ್ ಕಿಣಿ, ಶಾಲಾ ಮುಖ್ಯೋಪಾಧ್ಯಾಯರಾದ ವಸಂತಿ ಹೆಚ್. ಜಿ., ಬೈಲೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಹಶಿಕ್ಷಕರಾದ ದಿನೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಸಾಲಿಯಾನ್ ಪ್ರಸ್ತಾವನೆಗೈರು, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ ವಂದಿಸಿದರು.

Related posts

ಕಾರ್ಕಳ ಪೆರ್ವಾಜೆ ಗಣೇಶೋತ್ಸವ ಸಮಿತಿ

Madhyama Bimba

ಸಂಜೀವ ಸಾಲಿಯಾನ್ ನಿಧನ

Madhyama Bimba

ಚಾರದಲ್ಲಿ ಬೈಕ್ ಅಪಘಾತ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More