ಕಾರ್ಕಳ ಸಾಣೂರು ನಿವಾಸಿ ಮನೋಜ್ ಎಂಬವರಿಗೆ ಉಡುಪಿಯಲ್ಲಿ ಜೀವ ಬೆದರಿಕೆ ಒಡ್ಡಿದ ಘಟನೆ ವರದಿ ಆಗಿದೆ.
ಉಡುಪಿ ಅಂಬಲಪಾಡಿಯಲ್ಲಿರುವ ಮಹೀಂದ್ರಾ ಶೋ ರೂಂ ನಲ್ಲಿ ವಾಷಿಂಗ್ ಇನ್ ಚಾರ್ಜ್ ಮೆನ್ ಆಗಿ ಕೆಲಸವನ್ನು ಮಾಡಿಕೊಂಡಿದ್ದ ಇವರಿಗೆ ಈ ಕಂಪನಿಯ ಮಾಲಕರು ಕಾರ್ಕಳಕ್ಕೆ ಹೋಗಲು ತಿಳಿಸಿದ್ದರು.
ದಿನಾಂಕ:05/10/2024 ರಂದು ಕಾರ್ಕಳದ ಆನೆಕೆರೆ ಬಳಿ ಹೊಸದಾಗಿ ಇನ್ನೊಂದು ಮಹಿಂದ್ರಾ ಶೋರೂಂ ನ್ನು ತೆರೆದಿದ್ದು, ದಿನಾಂಕ:16/10/2024 ರಂದು ಸಮಯ ಸಂಜೆ 6 ಗಂಟೆಗೆ ಉಡುಪಿಯ ಮಹೀಂದ್ರಾ ಶೋ ರೂಂ ನಿಂದ ಮಹೀಂದ್ರ ವೀರೋ ಎಂಬ ವಾಹನವನ್ನು ಕಾರ್ಕಳ ಮಹೀಂದ್ರಾ ಶೋರೂಂ ಗೆ ಮಣಿಪಾಲ-ಕಾರ್ಕಳ ಮಾರ್ಗವಾಗಿ ತೆಗೆದುಕೊಂಡು ಹೋಗುತ್ತಿರುವಾಗ ಉಡುಪಿಯ ಜಯಲಕ್ಷ್ಮೀ ಬಟ್ಟೆ ಅಂಗಡಿ ಹತ್ತಿರ ಇವರ ವಾಹನವನ್ನು ವ್ಯಾಗನಾರ್ ಕಾರೊಂದು ಮುಂದೆ ಹೋಗಿ ಅಡ್ಡಗಟ್ಟಿ ಅದರಲ್ಲಿದ್ದ ಚಾಲಕ ಸೇರಿ 3 ಜನರು ಕಾರಿನಿಂದ ಇಳಿದು ಏನು ನಿನಗೆ ಕಣ್ಣು ಕಾಣುವುದಿಲ್ಲವ ನನ್ನ ಕಾರಿಗೆ ಗುದ್ದಿಸಿ ಮುಂದೆ ಹೋಗುತ್ತಿಯಾ ಎಂದು ಅವಾಚ್ಯ ಶಬ್ಧಗಳಿಂದ ಬೈದು ಜಾಸ್ತಿ ಮಾತನಾಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ದ್ದರು.
ಬಳಿಕ ಮೂರು ಜನರು ಸೀಟಿನಿಂದ ಕೆಳಗೆ ಎಳೆದು ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದು, ಅದರಲ್ಲಿದ್ದ ಒರ್ವನು ಅಲ್ಲೇ ಪಕ್ಕ ರಸ್ತೆಯ ಬದಿಯಲ್ಲಿದ್ದ ಮರದ ಕೋಲಿನಿಂದ ಬೆನ್ನಿಗೆ ಮತ್ತು ಕಾಲಿಗೆ ಹೊಡೆದು ಜೀವ ಬೆದರಿಕೆ ನೀಡಿರುತ್ತಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ , 182/2024 ಕಲಂ : 126,115,118(1),352,351(2),3(5) ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಿರುತ್ತಾರೆ.