ಕಾರ್ಕಳ: ಮಾಳ ಘಾಟ್ ಬಳಿ RJ 11 GC 5257 ನಂಬ್ರನ ಲಾರಿ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು MH 12 PH 6596 ನಂಬ್ರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡು ಕಾರಿನ ಚಾಲಕ ಗಾಯಗೊಂಡ ಘಟನೆ ನ. 4ರಂದು ನಡೆದಿದೆ.
ಮಂಗಳೂರು ನಿವಾಸಿ ಕಾರು ಚಾಲಕ ಅಭಿಜಿತ್ ಮಂಗಳೂರಿನಿಂದ ಶೃಂಗೇರಿಗೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಅಭಿಜಿತ್ ಪತ್ನಿ ದೀಪಾಲಿ ವೈಚಾಲ್ ಎಂಬವರಿಗೆ ಎಡಕೈ ಮಣಿಗಂಟಿಗೆ ಗಾಯವಾಗಿದ್ದು, ಮಗಳು ನೂಪುರ್ ವೈಚಾಲ್ ಎಂಬವರಿಗೆ ಮುಖಕ್ಕೆ ಗಾಯವಾಗಿದ್ದು, ಮಗಳು ಸಾಯಿ ವೈಚಾಲ್ ಎಂಬವರಿಗೆ ಮೂಗಿನಿಂದ ರಕ್ತಗಾಯವಾಗಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.