ಹೆಬ್ರಿ: ಹೆಬ್ರಿಯ ಉಪ ನಿರೀಕ್ಷಕರು ಮಹೇಶ್ ಟಿ.ಎಂರವರು ದಿನಾಂಕ 06.10.2024 ರಂದು ಖಚಿತ ಮಾಹಿತಿಯ ಮೇರೆಗೆ ಶಿವಪುರ-ಪಡುಕುಡೂರು ರಸ್ತೆಯ ಮುಕ್ಕಾಣಿ ಎಂಬಲ್ಲಿ ಬೆಳಿಗ್ಗೆ ಸಮಯ ಸುಮಾರು 09.00ಗಂಟೆಗೆ ವಾಹನ ತಪಾಸಣೆ ಮಾಡುತ್ತಿರುವಾಗ ಸತೀಶ್ ಎಂಬವರು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಪಡುಕುಡೂರು ಗ್ರಾಮದ ಕುಂಜಾಲು ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಕಳವು ಮಾಡಿ ಯಾವುದೇ ಪರವಾನಿಗೆಯನ್ನು ಪಡೆಯದೇ ಲಾಭದ ಉದ್ದೇಶದಿಂದ ಅಕ್ರಮವಾಗಿ ಲಾರಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

