ಮುನಿಯಾಲು ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಾಗೂ ವೀಲ್ ಚಯರ್ ವಿತರಣೆ ಮತ್ತು 12 ನೇ ವರ್ಷದ ಸಭಾ ಕಾರ್ಯಕ್ರಮ ಮುದ್ರಾಡಿಯ ಮಹಾಗಣಪತಿ ಸೇವಾಸಂಘದ ನೂತನವಾಗಿ ನಿರ್ಮಾಣವಾದ ಸಭಾಭಾವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷರಾದ ಡಾ. ಸುದರ್ಶನ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕರಾದ ವಿ. ಸುನೀಲ್ ಕುಮಾರ್, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಜೀರ್ಣೋದ್ದಾರ ಸಮಿತಿ , ನೆಹರು ನಗರ ಪಿಂಪ್ರಿ ಪುಣೆ ಇದರ ಅಧ್ಯಕ್ಷರಾದ ಜಯಾನಂದ್ ಶೆಟ್ಟಿ, ಮುನಿಯಾಲು ಸಂಜೀವಿನಿ ಗೋಧಾಮಿನ ರಾಮಕೃಷ್ಣ ಆಚಾರ್, ಮುನಿಯಾಲು ಉದ್ಯಮಿ ದಿನೇಶ್ ಪೈ, ಕಾಡುಹೊಳೆ ಜಂಗಮೇಶ್ವರ ಮಠದ ರಾಘವೇಂದ್ರ ಭಟ್, ಮುದ್ರಾಡಿ ಹಿರಿಯ ವೈದ್ಯರಾದ ಎಂ. ಎಸ್. ರಾವ್, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಭುಜಂಗ ಶೆಟ್ಟಿ, ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಸಂತಿ ಪೂಜಾರಿ, ಕೃಷ್ಣಕಾಂತ್ ನಾಯಕ್ ಮುನಿಯಲ್, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಅಮೀನ್, ಮುನಿಯಾಲು ಹಿಂದೂ ಹೆಲ್ಪಲೈನ್ ಜನಸೇವಾ ಟ್ರಸ್ಟ್ನ ಅಧ್ಯಕ್ಷ ರಾಜೇಶ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು.
ಕಾರ್ಯಕ್ರದಲ್ಲಿ ಸುಮಾರು ಹತ್ತು ಫಲಾನುಭವಿಗಳಿಗೆ ವೀಲ್ ಚೇರ್ ಮತ್ತು ಅನಾರೋಗ್ಯ ಪೀಡಿತರಿಗೆ ಧನ ಸಹಾಯವನ್ನು ವಿತರಿಸಲಾಯಿತು.
ಸುಹಾಸ್ ಶೆಟ್ಟಿ ಮುಟ್ಲುಪಾಡಿ ಸ್ವಾಗತಿಸಿದರು. ರಾಮಚಂದ್ರ ನಾಯಕ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಚೈತನ್ಯ ಕಲಾವಿದರು ಬೈಲೂರು ಈ ತಂಡದಿಂದ ಅಷ್ಟಮಿ ನಾಟಕವನ್ನು ಪ್ರದರ್ಶಿಸಲಾಯಿತು.