ಅಜೆಕಾರು: ರತೀಶ್ ತೋಮಸ್ (41), ಚಿಕ್ಕಮಗಳೂರು ಇವರು 2 ತಿಂಗಳಿನಿಂದ ಕುಕ್ಕುಜೆ ಗ್ರಾಮದ ಪ್ರಸನ್ನ ರವರ ರಬ್ಬರ್ ತೋಟವನ್ನು ಲೀಸ್ ಗೆ ಪಡೆದುಕೊಂಡು ಅಜೇಶ್ ಮೋಹನ್ ರವರೊಂದಿಗೆ ಟ್ಯಾಪಿಂಗ್ ಕೆಲಸ ಮಾಡಿಕೊಂಡು ತೋಟದಲ್ಲಿರುವ ಮನೆಯಲ್ಲಿ ವಾಸಮಾಡಿಕೊಂಡಿದ್ದರು.
ದಿನಾಂಕ 09.11.2024 ರಂದು ಬೆಳಿಗ್ಗೆ 03.00 ಗಂಟೆಗೆ ಅವರು ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದು, ಅಜೇಶ್ ಮೋಹನ್ ರೂಮ್ ನಲ್ಲಿ ಮಲಗಿದ್ದು , ಬೆಳಿಗ್ಗೆ 07.00ಗಂಟೆಗೆ ಟ್ಯಾಂಪಿಂಗ್ ಕೆಲಸ ಮುಗಿಸಿ ವಾಪಾಸ್ಸು ಬರುವಾಗ ರೂಮ್ ನಲ್ಲಿ ಅಜೇಶ್ ಮೋಹನ್ ಕಾಣದೇ ಇದ್ದು , ರೂಮ್ ನ ಬಳಿ ನಿಲ್ಲಿಸಿದ್ದ KA-18-EC-9725 ಮೋಟಾರ್ ಸೈಕಲ್ ಹಾಗೂ ರೂಮ್ ನ ಒಳಗಡೆ ಇದ್ದ 40ರಬ್ಬರ್ ಶೀಟ್ ಹಾಗೂ ಟೇಬಲ್ ಮೇಲೆ ಇಟ್ಟಿದ್ದ ರೂಪಾಯಿ 25000/- ಕಾಣಿಸಿರುವುದಿಲ್ಲ.
ಮೋಟಾರ್‌ಸೈಕಲ್, 40 ಶೀಟ್ ರಬ್ಬರ್ ಹಾಗೂ ರೂಪಾಯಿ 25000/- ನ್ನು ಅಜೇಶ್ ಮೋಹನ್ ಕಳವು ಮಾಡಿಕೊಂಡು ಹೋಗಿರುವ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.