ಕಾರ್ಕಳ

ಕಾರ್ಕಳ ನಗರ ಮಹಿಳಾ ಕಾಂಗ್ರೇಸ್ ಆಶ್ರಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ

 

ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಜನ್ಮದಿನಾಚರಣೆಯ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ವಿವಿದ ಸಾಂಸ್ಕೃತಿಕ ಸ್ಪರ್ಧೆಯನ್ನು ನವಂಬರ್ 17 ರಂದು ಬೆಳಿಗ್ಗೆ 9 ಗಂಟೆಯಿಂದ ಬಿಲ್ಲವ ಸೇವಾ ಸಂಘದ ಸಭಾ ಭವನ ಪೆರ್ವಾಜೆಯಲ್ಲಿ ಹಮ್ಮಿಕೊಳ್ಳಲಾಗಿದೆ.

5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿರಾಗಾಂಧಿ ಚಿತ್ರ ಬಿಡಿಸುವ ಸ್ಪರ್ಧೆ, ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಜಾನಪದ ಸಮೂಹ ನೃತ್ಯ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗೆ ಸಿನೆಮಾ ಸಮೂಹ ನೃತ್ಯ ಸ್ಪರ್ಧೆ ಹಾಗೂ ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಬಹಮಾನಗಳು÷ ನೃತ್ಯ ಸ್ಪರ್ಧೆಯ ವಿಜೇತರಿಗೆ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ಪ್ರಥಮ ರೂ 4004, ದ್ವಿತೀಯ ರೂ 3003, ತೃತೀಯ 2002/ ನಗದು ಪುರಸ್ಕಾರ, ಮಹಿಳೆಯರ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆಯ ವಿಜೇತರಿಗೆ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ಪ್ರಥಮ ರೂ 2222, ದ್ವಿತೀಯ ರೂ1555, ತೃತೀಯ 1111 ನಗದು ಪುರಸ್ಕಾರ,

ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ಪ್ರಥಮ 1555, ದ್ವಿತೀಯ 1111,ತೃತೀಯ 777 ನಗದು ಪುರಸ್ಕಾರ ಹಾಗೂ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಗುವುದು.

ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರು ಉದ್ಘಾಟಿಸಲಿದ್ದು ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯದಕ್ಷ ಮಂಜುನಾಥ್ ಭಂಡಾರಿಯವರು, ಕೆಪಿಸಿಸಿ ಪ್ರಚಾರ ಸಮಿತಿ ಅದ್ಯಕ್ಷ ವಿನಯ್ ಕುಮಾರ್ ಸೊರಕೆ ಜಿಲ್ಲಾ ಕಾಂಗ್ರೇಸ್ ಅದ್ಯಕ್ಷ ಅಶೋಕ್ ಕೊಡವೂರು, ಜಿಲ್ಲಾ ಮಹಿಳಾ ಅದಕ್ಷೆ ಗೀತಾ ವಾಗ್ಲೆ, ಕಾಂಗ್ರೇಸ್ ನಾಯಕರಾದ ಉದಯ್ ಶೆಟ್ಟಿ ಮುನಿಯಾಲು, ರಾಜ್ಯ ಹಿಂದುಳಿದ ವರ್ಗಗ ಘಟಕದ ಉಪಾಧ್ಯಕ್ಷ ಡಿ. ಆರ್ ರಾಜು, ಬ್ಲಾಕ್ ಕಾಂಗ್ರೇಸ್ ‌ಅದ್ಯಕ್ಷ ಶುಭದರಾವ್ ಹಾಗೂ ಪ್ರಮುಖ ನಾಯಕರು ಭಾಗವಹಿಸಲಿರುವರು ಎಂದು ನಗರ ಕಾಂಗ್ರೇಸ ಅದ್ಯಕ್ಷ ರಾಜೇಂದ್ರ ದೇವಾಡಿಗ ಕಲ್ಲೊಟ್ಟೆ ಹಾಗೂ ನಗರ ಮಹಿಳಾ ಕಾಂಗ್ರೇಸ್ ಅದ್ಯಕ್ಷೆ ರೀನಾ ಜುಲಿಯೆಟ್ ಡಿ’ ಸೋಜ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮೂಗು ಹಾಗೂ ಬಾಯಲ್ಲಿ ರಕ್ತ ಬಂದು ಮೃತ್ಯು

Madhyama Bimba

ಶ್ರದ್ಧಾಂಜಲಿ ಸಭೆ

Madhyama Bimba

ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾಕ್ಕೆ ಪೇಜಾವರ ಶ್ರೀ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More