ಕಾರ್ಕಳಹೆಬ್ರಿ

ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾಕ್ಕೆ ಪೇಜಾವರ ಶ್ರೀ ಭೇಟಿ

ಹೆಬ್ರಿ : ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾಕ್ಕೆ ಉಡುಪಿ ಪೇಜಾವರ ಮಠಾಧೀಶ ಹಾಗೂ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವಿಶ್ವಸ್ಥ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಂಗಳವಾರ ಭೇಟಿ ನೀಡಿದರು.


ಶ್ರದ್ಧಾ ಭಕ್ತಿಯಿಂದ ಯಾರು ಮನೆ ಮನೆಗಳಲ್ಲಿ ಭಜಿಸುತ್ತಾರೆ ಅವರಿಗೆ ದೇವರ ಅನುಗ್ರಹ ಪಾಪ್ತಿ ಆಗುವುದರಲ್ಲಿ ಸಂಶವಿಲ್ಲ. ದೈನಂದಿನ ಜೀವನದಲ್ಲಿ ನಿರಂತರ ಮಾಧ್ವ ಸಿದ್ದಾಂತವನ್ನು ಅಳವಡಿಸಿ, ಪ್ರಚಾರ ಪಡಿಸುವುದರ ಜೊತೆಗೆ, ತನ್ನ ಸಂಪನ್ಮೂಲಗಳಲ್ಲಿ ಒಂದಿಷ್ಟು ಪಾಲನ್ನು ಸಮಾಜದ ಏಳಿಗೆಗೆ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಹಕರಿಸುತ್ತಿರುವ ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವಿದ್ವಾನ್ ರಾಘವೇಂದ್ರ ಭಟ್ಟರು ಸಮಾಜಕ್ಕೆ ಒಂದು ಮಾದರಿ ಎಂದು ಶ್ರೀಪಾದರು ತಮ್ಮ ಪಟ್ಟದ ದೇವರಿಗೆ ಪೂಜೆ ನೆರವೇರಿಸಿ ಫಲ ಮಂತ್ರಾಕ್ಷತೆ ನೀಡಿ ಮಾತನಾಡಿದರು.


ನಂತರ ಸ್ಥಳೀಯ ಅಜೆಕಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಮತ್ತು ಅನ್ನಸಂತರ್ಪಣೆ ನಡೆಯಿತು.

Related posts

ಕಾರ್ಕಳ: ಅಕ್ರಮ ಮದ್ಯ ಮಾರಾಟ – ಪ್ರಕರಣ ದಾಖಲು

Madhyama Bimba

ನ್ಯಾಯ ಕ್ಷೇತ್ರದ ದಿಗ್ಗಜ ದಿ. ಎಂ. ಕೆ. ವಿಜಯ ಕುಮಾರ್ – ಕೇರಳ ಸ್ಟೇಟ್ ಅಟಾರ್ನಿ ಅನೂಪ್ ವಿ. ನಾಯರ್

Madhyama Bimba

ಕುಕ್ಕುಂದೂರು ಫ್ರೆಂಡ್ಸ್ ಸದಸ್ಯರಿಂದ ಶ್ರೀ ದುರ್ಗಾದೇವಿ ಸರ್ಕಾರಿ ಅನುದಾನಿತ ಶಾಲೆ ಸ್ವಚ್ಛತೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More