ಹೆಬ್ರಿ : ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ ಗಣೇಶೋತ್ಸವವು ಸುವರ್ಣ ಸಂಭ್ರಮದಲ್ಲಿದ್ದು ಸುವರ್ಣ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲು ಭಾನುವಾರ ಹೆಬ್ರಿ ಶ್ರೀರಾಮ ಮಂದಿರಲ್ಲಿ ಪೂರ್ವಭಾವಿ ಸಭೆಯು ಸಮಿತಿಯ ಅಧ್ಯಕ್ಷ ಎಚ್. ಜನಾರ್ಧನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಹೆಬ್ರಿಯ ಗಣೇಶೋತ್ಸವದ ಸುವರ್ಣ ಸಂಭ್ರಮವನ್ನು ಯಶಸ್ವಿಗೊಳಿಸಲು ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಎಚ್. ಜನಾರ್ಧನ್ ಸರ್ವರ ಸಹಕಾರ ಕೋರಿದರು.
ಗೌರವಾಧ್ಯಕ್ಷರಾದ ಎಚ್.ಗುಂಡೂ ನಾಯಕ್ ಮತ್ತು ಹಿರಿಯರಾದ ಪೂರ್ವಾಧ್ಯಕ್ಷ ಎಚ್. ಭಾಸ್ಕರ ಜೋಯಿಸ್ ಮಾತನಾಡಿ ಹೆಬ್ರಿಯ ಗಣೇಶೋತ್ಸವದ ಸುವರ್ಣ ಸಂಭ್ರಮವನ್ನು ಸರ್ವರು ಸೇರಿ ಸಂಭ್ರಮದಿಂದ ಆಚರಿಸಲು ಕೈಜೋಡಿಸಲು ಮನವಿ ಮಾಡಿದರು. 5 ದಿನಗಳ ಸಂಭ್ರಮದ ಗಣೇಶೋತ್ಸವ ನಡೆಸಲು ಸಮಿತಿಯ ತೀರ್ಮಾನಿಸಿ ಸಂಭ್ರಮದ ಯಶಸ್ಸಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ನಿರಂತರವಾಗಿ ಸಮಾಲೋಚನಾ ಸಭೆಯನ್ನು ನಿರ್ಧರಿಸಲಾಯಿತು.
ಸಭೆಯಲ್ಲಿ ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ನಾಯಕ್, ಸಮಿತಿಯ ಪದಾಧಿಕಾರಿಗಳಾದ ಪ್ರಕಾಶ ಮಲ್ಯ, ದಿವಾಕರ ಶೆಟ್ಟಿ, ಶಂಕರ ಶೇರಿಗಾರ್, ದೇವಾನಂದ ನಾಯಕ್, ಎಚ್.ಕೆ.ಸುಧಾಕರ್ ಉಪಸ್ಥಿತರಿದ್ದರು.
ಹೆಬ್ರಿಯ ಮುಖಂಡ ಎಚ್.ಪ್ರವೀಣ್ ಬಲ್ಲಾಳ್, ಅರ್ಚಕ ವೇದಮೂರ್ತಿ ನಾಗರಾಜ ಜೋಯಿಸ್ ಸೇರಿದಂತೆ ಹಿರಿಯರು, ಪ್ರಮುಖರು, ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಪ್ರಸಾದ್ ಶೆಟ್ಟಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು.