ಕಾರ್ಕಳ: ನೀರೆ ಗ್ರಾಮದ ಮೋಹನ (65ವರ್ಷ), ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಬೈಲೂರಿನಲ್ಲಿ ಸ್ವಂತ ಜಾಗ ಇದ್ದು ಬೈಲೂರಿಗೆ ಬಂದರೆ ತಂದೆಯ ಮನೆಯಲ್ಲಿ ಉಳಿದುಕೊಳ್ಳುತ್ತಾರೆ.
ಅವರು ಒಂದು ವಾರದಿಂದ ತಂದೆಯ ಮನೆಯಲ್ಲಿ ಇದ್ದು ದಿನಾಂಕ 21.11.2024 ರಂದು ಬೆಳಿಗ್ಗೆ 7 ಗಂಟೆಯಿಂದ ಮನೆಯಿಂದ ಹೊರಟಿರುತ್ತಾರೆ.
ದಿನಾಂಕ 22.11.2024ರಂದು ಮಧ್ಯಾಹ್ನ 3.30 ಗಂಟೆಗೆ ಅಳಿಯನಾದ ನಲ್ಲೂರಿನ ಸುರೇಶ ಫೋನ್ ಮಾಡಿ ಮೋಹನ ರವರು ಪಡ್ಡಾಯಿಬೆಟ್ಟು ಹೊಳೆ ಬದಿಯಲ್ಲಿ ಕವುಚಿ ಮಲಗಿದ ಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿಸಿದ್ದು, ಸಂಜೀವರವರು ಸ್ಥಳಕ್ಕೆ ಬಂದು ನೋಡಿದಾಗ ಮೋಹನ ರವರು ಹೊಳೆಯ ಬದಿಯಲ್ಲಿ ಕವುಚಿ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದು ಬಾಯಿಯಿಂದ ನೊರೆ ಬರುತ್ತಿದ್ದು, ಹತ್ತಿರದಲ್ಲಿ ಒಂದು ಪ್ಲಾಸ್ಟಿಕ್ ಬಾಟಲಿ ಇದ್ದಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.