ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಾರ್ಷಿಕ ಮಹಾಸಭೆಯು ನ. 17ರಂದು ಶಿರ್ಲಾಲು ಸಾರ್ವಜನಿಕ ಗಣೇಶೋತ್ಸವ ಮಂದಿರದಲ್ಲಿ ನಡೆಯಿತು.
ವಾರ್ಷಿಕ ಲೆಕ್ಕಪತ್ರವನ್ನು ಜಯಾನಂದ ಪೂಜಾರಿ ಮಂಡಿಸಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ದೇವೆಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿಯಾಗಿ ಜಯಾನಂದ ಪೂಜಾರಿ, ಗೌರವಾಧ್ಯಕ್ಷರಾಗಿ ಅನಂತ್ರಾಜ್ ಪೂವಣಿ, ವಿನೋದ್ ಪ್ರಭು ಕಾರ್ಕಳ , ಉಪಾಧ್ಯಕ್ಷರಾಗಿ ವೆಂಕಟೇಶ್ ಪ್ರಭು, ನಿತ್ಯಾನಂದ ನಾಯಕ್, ಕೋಶಾಧಿಕಾರಿ ಯಾಗಿ ಪಾಂಡುರಂಗ ನಾಯಕ್, ಕಾರ್ಯದರ್ಶಿಯಾಗಿ ರಂಜಿತ್ ಗೌಡ ಇವರನ್ನು ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.