Blog

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು vs ಮುಖ್ಯಧಿಕಾರಿ

ಕಾರ್ಕಳ ವೆಂಕಟರಮಣ ದೇವಸ್ಥಾನಕ್ಕೆ ಮುಖ್ಯಾಧಿಕಾರಿಗಳು ನೀಡಿರುವ ಏಕಪಕ್ಷೀಯ ನೋಟೀಸ್‌ಗೆ ಪುರಸಭಾ ಮುಖ್ಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಪುರಸಭಾ ಅಧ್ಯಕ್ಷ ಯೋಗೀಶ್ ಹಾಗು ಉಪಾಧ್ಯಕ್ಷರಾದ ಪ್ರಶಾಂತ್ ಕೋಟ್ಯಾನ್ ತಿಳಿಸಿದ್ದಾರೆ.

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನ ಬಹಳ ಇತಿಹಾಸ ಪ್ರಸಿದ್ಧ ಪುರಾತನ ದೇವಸ್ಥಾನವಾಗಿದ್ದು, ಭಕ್ತಾಧಿಗಳು ಈ ಕ್ಷೇತ್ರವನ್ನು ಪಡುತಿರುಪತಿ ಎಂದೇ ನಂಬಿ ಆರಾಧಿಸಿಕೊಂಡು ಬಂದಿರುತ್ತಾರೆ. ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಿಂದ ಅನಂತಶಯನದವರೆಗಿನ ರಸ್ತೆಯನ್ನು ರಥಬೀದಿ ಎಂದೇ ಕರೆಯಲಾಗುತ್ತಿದೆ. ಈ ರಸ್ತೆಯಲ್ಲಿ ಕಾಲಾನು ಕಾಲದಿಂದ ಶ್ರೀ ವೆಂಕಟರಮಣ ದೇವರ ವಾರ್ಷಿಕ ದೀಪೋತ್ಸವ ಹಾಗೂ ರಥೋತ್ಸವದ ಸಂದರ್ಭದಲ್ಲಿ ಗುರ್ಜಿ ಹಾಗೂ ರಥಗಳನ್ನು ಅಳವಡಿಸಿ ಅದರಲ್ಲಿ ಶ್ರೀ ದೇವರನ್ನು ಇರಿಸಿ ಪೂಜಿಸಲಾಗುತ್ತಿದೆ. ಈ ರೀತಿಯ ಆಚರಣೆ ನೂರಾರು ವರ್ಷಗಳ ಹಿಂದಿನಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿರುತ್ತದೆ. ದೀಪೋತ್ಸವ ಹಾಗೂ ರಥೋತ್ಸವ ಸಂದರ್ಭದಲ್ಲಿ ಸದ್ರಿ ಗುರ್ಜಿಗಳನ್ನು ಅಳವಡಿಸಲು ಸಣ್ಣ ಪ್ರಮಾಣದಲ್ಲಿ ರಸ್ತೆಯನ್ನು ಅಗೆದು ದೀಪೋತ್ಸವ/ರಥೋತ್ಸವ ಮುಗಿದ ಮಾರನೆಯ ದಿನವೇ ಸದ್ರಿ ಆಗೆದ ರಸ್ತೆಯ ಭಾಗವನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯ ರಸ್ತೆಯನ್ನಾಗಿ ದೇವಸ್ಥಾನ ವತಿಯಿಂದ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಈದಿನದವರೆಗೂ ಕಾರ್ಕಳ ಪುರಸಭೆಯ ಆಡಳಿತವು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.


ಕಾರ್ಕಳ ತಾಲೂಕಿನ ಅಭಿವೃದ್ದಿಗೆ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಅದಕ್ಕೆ ಸಂಬಂಧಪಟ್ಟ ಆಡಳಿತ ಮಂಡಳಿಯ ಕೊಡುಗೆ ಅಪಾರವಾಗಿರುತ್ತದೆ. ಕಾರ್ಕಳ ಮುಖ್ಯರಸ್ತೆಯ ಅಗಲೀಕರಣದ ಸಂದರ್ಭದಲ್ಲಿ ಶ್ರೀ ವೆಂಕಟರಮಣ ದೇವಳದ ಕೆರೆಗೆ ಹೋಗುವ ಪ್ರದೇಶ, ಮಣ್ಣಗೋಪುರ ಪ್ರದೇಶ ಹಾಗೂ ಅನಂತಶಯನ ಪದ್ಮಾವತಿ ದೇವಸ್ಥಾನದ ಎದುರುಗಡೆ ಪ್ರದೇಶದಲ್ಲಿ ರಸ್ತೆಗಾಗಿ ತಮ್ಮ ಜಾಗವನ್ನು ಬಿಟ್ಟುಕೊಟ್ಟು ನಗರದ ಅಭಿವೃದ್ಧಿಗೆ ಕೈ ಜೋಡಿಸಿರುವುದು ಉಲ್ಲೇಖನೀಯ ಮಾತ್ರವಲ್ಲದೆ. ಕಾರ್ಕಳದ ಸಿಗಡಿಕೆರೆ ಅಭಿವೃದ್ಧಿ ಸಂದರ್ಭದಲ್ಲಿ ಪ್ರಥಮ ದೇಣಿಗೆಯನ್ನು ದೇವಸ್ಥಾನದ ವತಿಯಿಂದಲೇ ನೀಡಲಾಗಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

” ತಮ್ಮ ಮೇಲೆ ಉಲ್ಲೇಖಿತ ಪತ್ರವು ತಮ್ಮ ಏಕಪಕ್ಷೀಯ ಆಡಳಿತಾತ್ಮಕ ನಿರ್ಧಾರವಾಗಿದ್ದು, ಈ ಬಗ್ಗೆ ಪುರಸಭೆಯ ಸಾಮನ್ಯ ಸಭೆಯಲ್ಲಾಗಲಿ, ಪುರಸಭೆಯ ಅಧ್ಯಕ್ಷ ಯಾ ಉಪಾಧ್ಯಕ್ಷರಲ್ಲಾಗಲೀ ಯಾ ದೇವಸ್ಥಾನ ಇರುವ ಪ್ರದೇಶಕ್ಕೆ ಸಂಬಂಧಪಟ್ಟ ವಾರ್ಡ್‌ ಸದಸ್ಯರಲ್ಲಾಗಲೀ ಯಾವುದೇ ರೀತಿಯ ಚರ್ಚೆಯನ್ನು ಮಾಡಿರುವುದಿಲ್ಲ ಮತ್ತು ಸದ್ರಿಯವರುಗಳ ಗಮನಕ್ಕೂ ತಂದಿರುವುದಿಲ್ಲ. ತಮ್ಮ ಏಕಪಕ್ಷೀಯ ನಿರ್ಧಾರದಿಂದಾಗಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ದಕ್ಕೆಯಾಗಿರುತ್ತದೆ. ತಮ್ಮ ಈ ಪತ್ರ ವ್ಯವಹಾರಕ್ಕೆ ಪುರಸಭೆಯ ಕೌನ್ಸಿಲ್‌ನ ಒಪ್ಪಿಗೆಯೂ ಇರುವುದಿಲ್ಲ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ

Related posts

ಕೋಳಿ ಅಂಕ

Madhyama Bimba

ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಕಾಮಗಾರಿ ಗೊಂದಲ – ಮಣ್ಣಿನ ಮೇಲೆ ಹತ್ತಿದ ಓಮ್ನಿ

Madhyama Bimba

ಮಿಯ್ಯಾರಿನಲ್ಲಿ ಅಪರಿಚಿತ ಶವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More