ಕಾರ್ಕಳ: ಗೆಳೆಯರೊಂದಿಗೆ ಕಾರ್ಕಳದ ದುರ್ಗಾ ಫಾಲ್ಸ್‌ಗೆ ಭೇಟಿ ನೀಡಿದ ಸಂದರ್ಭ ನೀರಿನಲ್ಲಿ ಆಟವಾಡುತ್ತಿದ್ದಾಗ ಕಾಲು ಜಾರಿ ಬಿದ್ದು ಶಾಲಾ ವಿದ್ಯಾರ್ಥಿ ಮೃತ್ಯುವಿಗೀಡಾದ ಘಟನೆ ನ. 28ರಂದು ನಡೆದಿದೆ.
ಉಡುಪಿ ಪುತ್ತೂರು ನಿವಾಸಿ ಗ್ಲೇನ್‌ಸನ್ ಜೋಯಲ್ ಡಾಯಸ್ (19) ಮೃತಪಟ್ಟ ದುರ್ದೈವಿ.
ನ. 28ರಂದು ಬೆಳಿಗ್ಗೆ 09.00 ಗಂಟೆಗೆ ಮನೆಯಿಂದ ಕಾಲೇಜ್‌ಗೆ ಹೋಗುವುದಾಗಿ ಹೇಳಿ ಹೋಗಿದ್ದು ಕಾಲೇಜ್‌ಗೆ ಹೋಗದೆ ತನ್ನ ಸ್ನೇಹಿತರೊಂದಿಗೆ ದುರ್ಗಾ ಫಾಲ್ಸ್ ಗೆ ಬಂದು ನೀರಿನಲ್ಲಿ ಆಟ ಆಡುತ್ತಿರುವಾಗ ಈ ದುರ್ಘಟನೆ ನಡೆದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.