Blog

ಇನ್ನಾ 400 ಕೆ ವಿ ವಿದ್ಯುತ್ ಸಮಸ್ಯೆ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪ

ಇನ್ನಾ 400 ಕೆ ವಿ ವಿದ್ಯುತ್ ಪವರ್ ಲೈನ್ ಸಮಸ್ಯೆ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ವಿಧಾನ ಮಂಡಲದಲ್ಲಿ ಧ್ವನಿ ಎತ್ತಿದ್ದಾರೆ.

ದಿನಾಂಕ 12.12.2024ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ  ಮಂಜುನಾಥ ಭಂಡಾರಿ ಅವರು ನಂದಿಕೂರು ಕಾಸರಗೋಡು ವಿದ್ಯುತ್ ಲೈನ್ ಕಾಮಗಾರಿಯ ಅವೈಜ್ಞಾನಿಕ ಯೋಜನೆ ಕುರಿತಂತೆ ಹಾಗೂ ಇದರಿಂದ ರೈತರಿಗೆ ಆಗುವ ಅನಾನುಕೂಲವನ್ನು ವಿವರಿಸಿದರು.

ಕೂಡಲೇ ಟವರ್ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ನೆಲದಡಿಯಲ್ಲಿ ವಿದ್ಯುತ್ ಲೈನ್ ನಿರ್ಮಾಣ ಮಾಡುವ ಕುರಿತಂತೆ ಶೂನ್ಯ ವೇಳೆಯಲ್ಲಿ  ಇಂಧನ ಸಚಿವರನ್ನು ಒತ್ತಾಯಿಸಿದರು.

ಉದಯ ಶೆಟ್ಟಿ ಸಂತಸ : ವಿಧಾನ ಪರಿಷತ್ ನಲ್ಲಿ ಇಂದು ಮಂಜುನಾಥ ಭಂಡಾರಿಯವರು ವಿದ್ಯುತ್ ಪವರ್ ಲೈನ್ ಬಗ್ಗೆ ಮಾಡಿರುವ ಪ್ರಸ್ತಾಪ
ಇನ್ನಾದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.

ಈ ಯೋಜನೆಯನ್ನು ವಿರೋಧಿಸಿ ಅಹೋ ರಾತ್ರಿ ಹೋರಾಟವನ್ನು ರೈತರೊಂದಿಗೆ ಸೇರಿ ಮಾಡಿದ್ದೆವು. ಈ ಹೋರಾಟಕ್ಕೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ಮತ್ತಷ್ಟು ಬಲ ನೀಡಿರುವುದು ಹೋರಾಟಗಾರರಿಗೆ ಸಿಕ್ಕ ಮೊದಲ ಜಯ ಎಂದು ಹೇಳಿದ್ದಾರೆ

Related posts

ಆದಿ ದ್ರಾವಿಡ ಸಂಘದಿಂದ ಸಹಾಯ ಧನ

Madhyama Bimba

ಮಿಯ್ಯಾರು ಮಹಾ ಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶದ ಆಮಂತ್ರಣ ಪತ್ರಿಕೆ ಹಾಗು ಲಾಂಚನ ಬಿಡುಗಡೆ

Madhyama Bimba

ಬಸ್ ಬೈಕ್ ಡಿಕ್ಕಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More