ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿಯವರು ತನ್ನ ವಿಶಿಷ್ಟ ಕಾರ್ಯವೈಖರಿಯಿಂದಾಗಿ ಜನರ ಗಮನ ಸೆಳೆದಿದ್ದಾರೆ.
ತನಗೆ ಸಿಕ್ಕ ಗೌರವಧನವನ್ನು ವಿದ್ಯಾರ್ಥಿಗಳಿಬ್ಬರಿಗೆ ಹಂಚಿ ನೀಡುವ ಮೂಲಕ ಮತ್ತೊಮ್ಮೆ ತನ್ನ ಸೇವಾ ಪ್ರೌಢಿಮೆ ಮೆರೆದಿದ್ದಾರೆ. ಸಮಾಜದಲ್ಲಿ ಸೇವಾ ಕಾರ್ಯಕ್ಕಾಗಿ ಅವರು ಮಾದರಿಯಾಗಿದ್ದಾರೆ.
ಪಿಯುಸಿ ವಿದ್ಯಾರ್ಥಿ ವಾಲ್ಪಾಡಿ ಕೌಶಿಕ್ ಪೂಜಾರಿ ಹಾಗೂ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ ಬೆಳುವಾಯಿಯ ಐದನೇ ತರಗತಿ ವಿದ್ಯಾರ್ಥಿ ಶ್ಲೋಕ ಶೆಟ್ಟಿ ಅವರಿಗೆ ತನ್ನ ಗೌರವ ಧನವನ್ನು ಹಂಚಿ ನೀಡಿದ್ದಾರೆ.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಳಿಕ ಅರುಣ್ ಶೆಟ್ಟಿ ಮೂಡುಬಿದಿರೆಗೆ ಸರಕಾರಿ ಬಸ್ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.