ಮೂಡುಬಿದಿರೆ

ಶಿರ್ತಾಡಿ, ಕಲ್ಲಬೆಟ್ಟಿಗೆ ಪ್ರತ್ಯೇಕ ಕೃಷಿ ಪತ್ತಿನ ಸಹಕಾರಿ ಸಂಘ

ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತೆಯ ಪ್ರತ್ಯೇಕ ಸಹಕಾರಿ ಸಂಘದ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧೀನಕ್ಕೊಳಪಟ್ಟಿದ್ದ ಶಿರ್ತಾಡಿ ಪಡು ಮೂಡುಕೊಣಾಜೆ ಗ್ರಾಮಗಳಿಗೆ ಪ್ರತ್ಯೇಕ ಸಹಕಾರಿ ಸಂಘ ಒದಗಿ ಬಂದಂತಾಗಿದೆ. ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) ಶಿರ್ತಾಡಿ ಎಂಬುದಾಗಿ ನಾಮಕರಣಗೊಳಿಸಿ ಪ್ರಮಾಣಿಕರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕಲ್ಲಬೆಟ್ಟು ಗ್ರಾಮಕ್ಕೂ ಪ್ರತ್ಯೇಕ ಕಲ್ಲಬೆಟ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.)ಕಲ್ಲಬೆಟ್ಟು ಜಾರಿಗೊಳ್ಳಲಿದೆ. ಈ ಸಂಘಗಳಿಗೆ ಶೀಘ್ರದಲ್ಲೇ ಆಡಳಿತಧಿಕಾರಿ ನೇಮಕ ನಡೆಯಲಿದೆ ಎಂದು ಪ್ರತ್ಯೇಕ ಸಹಕಾರಿ ಸಂಘದ ಬೇಡಿಕೆ ಮಂಡಿಸಿ ಸುದೀರ್ಘ ಹೋರಾಟ ನಡೆಸಿದ್ದ ಸುಕೇಶ್ ಶೆಟ್ಟಿ ಎದಮೇರು ತಿಳಿಸಿದ್ದಾರೆ.

ಪ್ರತ್ಯೇಕ ಸಹಕಾರಿ ಸಂಘದ ಪ್ರಮಾಣ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪನಿಭಂದಕರಾದ ಹೆಚ್. ಎನ್. ರಮೇಶ್ ಅವರು ಸುಕೇಶ್ ಶೆಟ್ಟಿಯವರ ತಂಡಕ್ಕೆ ಇತ್ತೀಚೆಗೆ ಮಂಗಳೂರ್ ನಲ್ಲಿ ಹಸ್ತಾಂತರ ಮಾಡಿದ್ದಾರೆ.

ಊರ ಪ್ರಮುಖರಾದ ಎಸ್. ಪ್ರವೀಣ್ ಕುಮಾರ್, ಲತಾ ಹೆಗ್ಡೆ, ಜಯಾನಂದ್ ಶೆಟ್ಟಿ, ಶಶಿಕುಮಾರ್ ರೈ, ಸಂತೋಷ್ ಶೆಟ್ಟಿ, ಸಂತೋಷ ಅಂಚನ್ ದಿನೇಶ್ ಶೆಟ್ಟಿ ತಿಮಾರ್, ಕೃಷ್ಣ ಭಟ್, ಸತೀಶ್ ಕೆ. ಸಿ., ಲಕ್ಷ್ಮಣ್ ಕೋಟ್ಯಾನ್ ಈ ಸಂದರ್ಭದಲ್ಲಿದ್ದರು.

Related posts

ನರೇಗಾದಲ್ಲಿ ದರೆಗುಡ್ಡೆ ಪಂಚಾಯತ್‌ಗೆ ಪ್ರಶಸ್ತಿ

Madhyama Bimba

ವಿಟಿಯು ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್, ದೇಹದಾಢ್ಯ ಸ್ಪರ್ಧೆ- ಆಳ್ವಾಸ್‌ಗೆ ಇಂಜಿನಿಯರ್ ಕಾಲೇಜಿಗೆ ಅವಳಿ ಪ್ರಶಸ್ತಿ,ಯೆನೆಪೋಯ ಪ್ರಶಸ್ತಿ

Madhyama Bimba

ಗಾಂಧಿ ಜಯಂತಿ : ಅರಣ್ಯ ಇಲಾಖಾಧಿಕಾರಿಗಳಿಂದ ಸ್ವಚ್ಛತಾ ಕಾರ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More