ಹೆಬ್ರಿ :ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಗಳ ಪಂಚಮ ಆರಾಧನಾ ಮಹೋತ್ಸವದ ಪರ್ವಕಾಲದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಮಾಜಿ ಅಧ್ಯಕ್ಷರಾದ ಕಾರ್ಕಳ ವೈ. ಸುಧಾಕರ ಭಟ್ ಗೋಶಾಲೆಗೆ ಏಳು ಕ್ವಿಂಟಾಲ್ ಹಿಂಡಿ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಹೆಬ್ರಿ ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಆಚಾರ್ಯ, ಗೋಶಾಲೆಯ ಟ್ರಸ್ಟಿಗಳಾದ ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು.