ಬೈಂದೂರಿನಲ್ಲಿ ಜ.೬ರಂದು ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ 12ನೇ ವರ್ಷ ವಯೋಮಿತಿಯ ವಿಭಾಗದಲ್ಲಿ ಬೋಳ ಗ್ರಾಮದ ಪ್ರಾಪ್ತಿ ಎಸ್. ಪೂಜಾರಿಯವರು ಭಾಗವಹಿಸಿ ಕುಮಿಟೆಯಲ್ಲಿ 1 ಚಿನ್ನದ ಪದಕ, ಕಟಾ ವಿಭಾಗದಲ್ಲಿ 1 ಬೆಳ್ಳಿಯ ಪದಕ ಹಾಗೆಯೇ 8ನೇ ವರ್ಷ ವಯೋಮಿತಿಯ ವಿಭಾಗದಲ್ಲಿ ಬೋಳ ಗ್ರಾಮದ ಆಯುಷ್ ಎಸ್. ಪೂಜಾರಿಯವರು ಭಾಗವಹಿಸಿ ಕುಮಿಟೆ ಮತ್ತು ಕಟಾದಲ್ಲಿ 2 ಕಂಚಿನ ಪದಕ ಪಡೆದಿರುತ್ತಾರೆ.
ಇವರು ಬೋಳ ಗ್ರಾಮದ ಪುಷ್ಪಾ ಸತೀಶ್ ಮತ್ತು ಸತೀಶ್ ಪೂಜಾರಿ ದಂಪತಿಗಳ ಮಕ್ಕಳಾಗಿದ್ದು, ಇವರಿಗೆ ಕರಾಟೆ ಶಿಕ್ಷಕರಾದ ಸತೀಶ್ ಬೆಳ್ಮಣ್‌ರವರು ತರಬೇತಿ ನೀಡಿರುತ್ತಾರೆ. ಇವರಿಬ್ಬರು ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದಾರೆ.