ಕಾರ್ಕಳ: ಕೆಲಸದ ನಿಮಿತ್ತ ಮೈಸೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಜ. 8ರಂದು ನಡೆದಿದೆ.
ಮುಡಾರು ಗ್ರಾಮದ ಪ್ರಕಾಶ್ (50) ಎಂಬವರು ಕಾಣೆಯಾದ ವ್ಯಕ್ತಿ. ಅವರ ಪತ್ನಿ ವಿಜಯ ಗಂಡ ಕಾಣೆಯಾಗಿರುವ ಬಗ್ಗೆ ನೀಡಿರುವ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.