ಹೆಬ್ರಿ: ಹೆಬ್ರಿ-ಕಾರ್ಕಳ ಮುಖ್ಯ ರಸ್ತೆಯ ಶಾರದಾ ಜನರಲ್ ಸ್ಟೋರ್ ಬಳಿ 4-5 ಜನರು ಸೇರಿಕೊಂಡು ಜೋರಾಗಿ ಬೊಬ್ಬೆ ಹಾಕುತ್ತಾ ಬೈದಾಡಿಕೊಂಡು, ಹೊಡೆದಾಡಿಕೊಂಡ ಐವರನ್ನು ಹೆಬ್ರಿ ಪೊಲೀಸರು ಬಂಧಿಸಿದ ಘಟನೆ ಜ. 10ರಂದು ನಡೆದಿದೆ.
ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನೀರೀಕ್ಷಕರಾದ ಮಹೇಶ್ ಟಿ ಎಮ್ ಹೆಬ್ರಿ ಜಂಕ್ಷನ್‌ನಲ್ಲಿ ರೌಂಡ್ಸ್‌ನಲ್ಲಿರುವಾಗ ನಡೆದ ಘಟನೆಯಲ್ಲಿ ಶಂಭು, ಧ್ರುವರಾಜ್, ಅರುಣ್ ಕುಮಾರ್, ಅಭಿಷೇಕ್ ಮತ್ತು ರಾಹುಲ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.