ಕಾರ್ಕಳ

ಜಾರ್ಕಳ ಮುಂಡ್ಲಿಯಲ್ಲಿ ಯಕ್ಷಗಾನವನ್ನು ತಡೆದ ಪೊಲೀಸರ ಕ್ರಮಕ್ಕೆ ಸಮಿತ್ ರಾಜ್ ಖಂಡನೆ

 

ಇಡೀ ಗ್ರಾಮದ ಗ್ರಾಮಸ್ಥರು ಸೇರಿಕೊಂಡು ಯಕ್ಷಗಾನ ಬಯಲಾಟವನ್ನು ತಮ್ಮ ಊರಿನಲ್ಲಿ ಪ್ರದರ್ಶಿಸುತ್ತಿರುವಾಗ ಕಾಂಗ್ರೆಸ್ಸಿನ ಕೆಲ ನಾಯಕರ ಸೂಚನೆ ಮೇರೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಯಕ್ಷಗಾನ ನಿಲ್ಲಿಸುವಂತೆ ಸೂಚಿಸಿರುವುದು ಯಕ್ಷಗಾನಕ್ಕೆ ಮಾಡಿದ ಅವಮಾನ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಹೇಳಿದ್ದಾರೆ.

ಪೊಲೀಸ ಇಲಾಖೆ ಕಾಂಗ್ರೆಸ್ಸಿನ ನಾಯಕರ ಅನತಿಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವುದು ನಾಚಿಕೆಗೇಡು, ಕರಾವಳಿ ಭಾಗದಲ್ಲಿ ಇಲ್ಲಿಯವರೆಗೆ ಯಾವುದೇ ಸರಕಾರ ಬಂದರೂ ಯಕ್ಷಗಾನ ಕೋಲ ನೇಮಗಳಿಗೆ ಅಡೆತಡೆ ಮಾಡಿದ ಉದಾರಣೆಗಳಿಲ್ಲ.

ಆದರೆ ಈ ಕಾಂಗ್ರೆಸ್ ಸರ್ಕಾರ ಬಂದಾಗಿಂದ ಹಿಂದೂ ಧರ್ಮದ ಆಚರಣೆಗಳಿಗೆ ಪದೇ ಪದೇ ಅಡಚಣೆ ಉಂಟು ಮಾಡುತ್ತಿರುವುದು, ಕಾಂಗ್ರೆಸ್ ನಾಯಕರ ಕೈಗೊಂಬೆಯಂತೆ ಪೊಲೀಸ್ ಇಲಾಖೆ ವರ್ತಿಸುವುದಲ್ಲದೆ ಯಕ್ಷಗಾನ ಆಯೋಜಕರ ಮೇಲೆ ಎಫ್. ಐ. ಆರ್ ದಾಖಲು ಮಾಡಿ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವುದು ಖಂಡನೀಯ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಕ್ರೈಸ್ಟ್‌ಕಿಂಗ್: ತುಳುನಾಡ ಇತಿಹಾಸ ದರ್ಶನ ಉಪನ್ಯಾಸ ಕಾರ್ಯಕ್ರಮ

Madhyama Bimba

ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಲು ಅರ್ಜಿ ಆಹ್ವಾನ

Madhyama Bimba

ಸೈಬರ್ ವಂಚನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More