ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮ ಪಂಚಾಯತಿಯ 2024-25ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯು ಮುದ್ರಾಡಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜ. 28ರಂದು ಪಂಚಾಯತ್ ಅಧ್ಯಕ್ಷರಾದ ವಸಂತಿ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಸಭೆಯ ನೊಡೆಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಪರವಾಗಿ ಶಿಕ್ಷಣ ಸಂಯೋಜಕರಾದ ಪ್ರಕಾಶ್ ಕೆ ರವರು ಭಾಗವಹಿಸಿದರು.
ವಿಶೇಷ ಗ್ರಾಮ ಸಭೆಯಲ್ಲಿ ಮಕ್ಕಳ ಹಕ್ಕುಗಳ ಕುರಿತ ಮಾಹಿತಿಯನ್ನು ಸಮೂಹ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಆಚಾರ್ಯ ರವರು, ಮಹಿಳೆಯರ ಕುರಿತ ಮಾಹಿತಿಯನ್ನು ಮೇಲ್ವಿಚಾರಕರಾದ ಗುಣವತಿಯವರು ಹಾಗೂ ಆರೋಗ್ಯ ಇಲಾಖೆಯ ಮಾಹಿತಿಯನ್ನು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಪವಿತ್ರಾ ರವರು ನೀಡಿದರು.
2024-25 ನೇ ಸಾಲಿನ ಸ್ವಂತ ಸಂಪನ್ಮೂಲದ ಅನುದಾನ ಶೇ 25 ರಡಿ 10 ಫಲಾನುಭವಿಗಳಿಗೆ ವೈಧ್ಯಕೀಯ ಮತ್ತು ಶೈಕ್ಷಣಿಕ ಸಹಾಯಧನ ಚೆಕ್, ಮತ್ತು 5 ರ ನಿಧಿಯಡಿ ವಿಕಲಚೇತನ ಫಲಾನುಭವಿಗೆ ಸಾಧನ ಸಲಕರಣೆಯನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಪಂಚಾಯತಿನ ಉಪಾಧ್ಯಕ್ಷರಾದ ರಮ್ಯಾಕಾಂತಿ, ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಹೆಗ್ಡೆ, ಗ್ರಾಮ ಪಂಚಾಯತಿನ ಸದಸ್ಯರುಗಳಾದ ಎಂ ಗಣಪತಿ, ಶುಭಧರ ಶೆಟ್ಟಿ, ಸಂತೋಷಕುಮಾರ್ ಶೆಟ್ಟಿ, ಜಗದೀಶ್ ಪೂಜಾರಿ, ಸನತ್ ಕುಮಾರ್, ಪಲ್ಲವಿ ಎಸ್ ರಾವ್, ವನಿತಾ ಎನ್ ರಾವ್, ನಾಗಶ್ರೀ, ರತ್ನಾ ಪೂಜಾರಿ, ಜಯಂತಿ, ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಮತ್ತು ಶಾಲಾ ಮಕ್ಕಳು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ಸಂರಕ್ಷಣಾಧಿಕಾರಿಗಳು, ಓಂ ಶಕ್ತಿ ಸಂಜೀವಿನಿ ಒಕ್ಕೂಟದವರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಗುಮಸ್ತರಾದ ಪದ್ಮನಾಭ ಆರ್ ಕುಲಾಲ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಅಮೃತಾ ಕುಲಾಲ್ ಸ್ವಾಗತಿಸಿ, ಗ್ರಾಮ ಪಂಚಾಯತ್ ಕಾರ್ಯದರ್ಶಿಯವರಾದ ಶೋಭಾವತಿ ಶೆಟ್ಟಿ ಯವರು ದನ್ಯವಾದ ಸಮರ್ಪಿಸಿದರು.