ಕಾರ್ಕಳ: ಕಾರ್ಕಳದ ಬಾಲಚಂದ್ರ ಎಂಬವರಿಗೆ ಸೈಬರ್ ವಂಚಕರು ವಂಚನೆ ಮಾಡಿದ ಘಟನೆ ವರದಿಯಾಗಿದೆ.
ಕಾರ್ಕಳ ಇವರು ಆಕ್ಸಿಸ್ ಬ್ಯಾಂಕ್‌ನಲ್ಲಿ ಹಾಗೂ ಐಡಿಎಫ್‌ಸಿ ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ ನ್ನು ಹೋದಿದ್ದು, ದಿನಾಂಕ 30.09.2024 ರಂದು ಇವರ ಮೊಬೈಲ್‌ಕ್ಕೆ ಮನುಜ್ ಶರ್ಮಾ ಎಂಬುವವರು ಕರೆ ಮಾಡಿ ಬ್ಯಾಂಕ್ ಸಮಸ್ಯೆಯನ್ನು ನಿವಾರಿಸುತ್ತೇನೆ ಎಂದು ಹೇಳಿ ಬ್ಯಾಂಕಿನ ವಿವರಗಳನ್ನು ಹಂಚಲು ಓಟಿಪಿ ಬರುವುದಾಗಿ ಹೇಳಿದಾಗ ಬಾಲಚಂದ್ರರವರು ಓಟಿಪಿಯನ್ನು ನೀಡಿರುತ್ತಾರೆ.
ದಿನಾಂಕ 01.10.2024 ರಂದು ಸಂಜೆ 4.00 ಘಂಟೆಯಿಂದ 6.30 ಗಂಟೆಯ ಮದ್ಯದ ಅವಧಿಯಲ್ಲಿ ಇವರ ಖಾತೆಯಿಂದ 76,188 ರೂಪಾಯಿ ಆಕ್ಸಿಸ್ ಹಾಗೂ ಐಡಿಎಫ್‌ಸಿ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಮೂಲಕ ಹಣ ಕಡಿತವಾಗಿರುವುದಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.