ಕಾರ್ಕಳಹೆಬ್ರಿ

ಹೆಬ್ರಿಯಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ – ಜನರಿಗೆ ಸತಾಯಿಸಬೇಡಿ, ಉತ್ತಮ ಸೇವೆ ನೀಡಿ : ಮಂಜುನಾಥ್

ಹೆಬ್ರಿ : ಸರ್ಕಾರಿ ಹುದ್ದೆಯಲ್ಲಿರುವ ನಾವೆಲ್ಲ ಸಾರ್ವಜನಿಕರ ಸೇವೆ ಮಾಡಲು ಬಂದಿರುವುದು. ಸೇವೆಯಲ್ಲಿ ವಿಳಂಬವಾದಾಗ ಪ್ರಶ್ನಿಸುವ ಹಕ್ಕು ಸಾರ್ವಜನಿಕರಿಗೆ ಇದೆ. ಇಂದು ನಾಳೆ ಎಂದು ಸತಾಯಿಸದೆ ಜನರ ಸೇವೆಯನ್ನು ಮಾಡಬೇಕು. ಕೆಲವರು ಪ್ರಶ್ನಿಸಿದ್ದನ್ನು ಮಟ್ಟ ಹಾಕಲು ನೋಡುತ್ತಾರೆ, ಇಂತಹ ಬೆಳವಣಿಗೆ ಒಳ್ಳೆಯದಲ್ಲ ಎಂದು ಉಡುಪಿ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮಂಜುನಾಥ ಶಂಕ್ರಳ್ಳಿ ಹೇಳಿದರು.


ಅವರು   ಹೆಬ್ರಿಯ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.


ಅಜೆಕಾರು ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಬಾರಿ ಪ್ರಮಾಣದ ಅವ್ಯವಹಾರ ನಡೆದಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಕಡ್ತಲ ನಿವಾಸಿ ಆನಂದ ನಾಯಕ್ ದೂರು ನೀಡಿದರು. ಡಿವೈಎಸ್ಪಿ ಮಂಜುನಾಥ ಶಂಕ್ರಳ್ಳಿ ಪ್ರತಿಕ್ರಿಯಿಸಿ ಸೂಕ್ತ ದಾಖಲೆಗಳನ್ನು ನೀಡಿದರೆ ತನಿಖೆ ನಡೆಸಲಾಗುವುದೆಂದರು.


ಅಧಿಕಾರಿಗಳಿಗೆ ಯಾರಾದರೂ ಪೋನಾಯಿಸಿ ಲೋಕಾಯುಕ್ತ ಎಂದು ಸುಳ್ಳು ಹೇಳಿ ಹಣ ಕೇಳಿದರೆ, ತಕ್ಷಣದಲ್ಲಿ ಲಿಖಿತ ರೂಪದಲ್ಲಿ ದೂರು ನೀಡಬೇಕು. ನಾವು ತ್ವರಿತವಾಗಿ ಕ್ರಮ ಜರುಗಿಸುತ್ತೇವೆ. ಜಿಲ್ಲೆಯಲ್ಲಿ ಹಲವಾರು ಕಡೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅಧಿಕಾರಿಗಳು ಎಚ್ಚರದಿಂದಿರಬೇಕೆಂದು. ಸರ್ವೆ ಕೆಲಸ ಮಾಡುವಾಗ ಅಧಿಕಾರಿಗಳು, ಬಹಳಷ್ಟು ಮುತುವರ್ಜಿ ಮಾಡಬೇಕಾಗಿದೆ, ಈ ಬಗ್ಗೆ ಅನೇಕ ಲೋಪಗಳಾಗಿವೆ ಜಾಗೃತೆ ವಹಿಸಿ ಎಂದು ಡಿವೈಎಸ್ಪಿ ಮಂಜುನಾಥ್ ಶಂಕ್ರಳ್ಳಿ ಹೇಳಿದರು.

ವಾರಾಹಿ ಯೋಜನೆಯಲ್ಲಿ ಎಲ್ಲರಿಗೂ ಕುಡಿಯುವ ನೀರು ದೊರೆಯಬೇಕು. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ಡಿವೈಎಸ್ಪಿ ಸೂಚಿಸಿದರು.

ಹೆಬ್ರಿ ತಹಶೀಲ್ಧಾರ್ ಎಸ್.ಎ. ಪ್ರಸಾದ್, ಇಒ ಶಶಿಧರ್ ಕೆ.ಜೆ, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಸಿದ್ದೇಶ್ವರ್, ಶ್ರೀನಿವಾಸ್ ಬಿ.ವಿ, ಗೋವಿಂದ ನಾಯ್ಕ್, ಸುರೇಂದ್ರನಾಥ್, ದಿವಾಕರ ಮರಕಾಲ, ತ್ರಿನೇಶ್ವರ, ಪಿಸ್ಐ ಮಹಾಂತೇಶ್ ಜಾಬಗೌಡ ಉಪಸ್ಥಿತರಿದ್ದರು.

Related posts

ಪಡುಕುಡೂರು: ಶಾಲಾ ಮಕ್ಕಳಿಗೆ ಟ್ಯೂಷನ್ ತರಗತಿ ಉದ್ಘಾಟನೆ

Madhyama Bimba

“ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ “ಕ್ರಿಯೇಟಿವ್ ಆವಿರ್ಭವ” ವಾರ್ಷಿಕೋತ್ಸವ ಕಾರ್ಯಕ್ರಮ”

Madhyama Bimba

ಮುಂಗಾರು ಮಳೆಯಿಂದ ಹಾನಿಗೊಳಗಾದ ಮೂಲಸೌಕರ್ಯಗಳ ಪುನರ್‌ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ: ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More