ಪಳ್ಳಿ: ಖಾಸಗಿ ಬಸ್ ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕಿದ ಪರಿಣಾಮ ವಯೋವೃದ್ಧರು ಬಸ್‌ನ ಹಿಂದಿನ ಸೀಟಿನಲ್ಲಿ ಕುಳಿತಿದ್ದು, ಬಸ್‌ನ ಒಳಗೆ ಬಿದ್ದು ಗಾಯಗೊಂಡ ಘಟನೆ ಜ. 16ರಂದು ನಡೆದಿದೆ.
ಪುಟ್ಟಪ್ಪ ಗಾಯಗೊಂಡವರು.
ಇವರು ಪಳ್ಳಿ ಎಂಬಲ್ಲಿರುವ ಡಾ| ಪ್ರಭುರವರಲ್ಲಿ ಮೈಕೈ ನೋವಿನ ಬಗ್ಗೆ ಚಿಕಿತ್ಸೆ ಪಡೆಯಲು ಮದ್ಮಲ್ ಪಾದೆ ಎಂಬಲ್ಲಿ ಬಸ್ ಹತ್ತಿದ್ದು, ಪಳ್ಳಿ ಮಾರಿಗುಡಿ ಬಳಿ ತಲುಪಿದಾಗ ಬಸ್ಸಿನ ಚಾಲಕ ಅಜಾಗರೂಕತೆಯಿಂದ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಇವರು ಬಿದ್ದು ಎಡಭುಜ ಹಾಗೂ ಕೈಮೂಳೆ ಮುರಿತವಾಗಿದ್ದು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.