ಕಾರ್ಕಳ- ಕಲ್ಯಾ ಗ್ರಾಮದ ಮಹೇಶ್ ಎಂಬವರ ಕುಂಟಾಡಿ ಯ ಮನೆಯಲ್ಲಿ ಅಡಿಕೆ ಮತ್ತು ರಬ್ಬರ್ ಕಳವು ಆಗಿದೆ.
ಎಂಟು ತಿಂಗಳಿಂದ ಕೇರಳದ ಜೈ ಮೋಹನ್ ಮತ್ತು ಆತನ ಹೆಂಡತಿ ಜಾಜಿ ಮೊಳ್ ಎಂಬವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು.
ರಬ್ಬರ್ ತೋಟದಿಂದ ಬೆಳೆದ ರಬ್ಬರ್ ಶೀಟನ್ನು ತೋಟದಲ್ಲಿನ ಗೋಡಾನ್ ನಲ್ಲಿ ಸಂಗ್ರಹ ಮಾಡುತ್ತಿದರು
ದಿನಾಂಕ 26/02/2025 ರಂದು ಬೆಳಿಗ್ಗೆ 06:30 ಗಂಟೆಗೆ ಮಹೇಶ್ರವರು ಜೈ ಮೋಹನ್ ಗೆ ಕರೆಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿದ್ದು
ಅನುಮಾನಗೊಂಡು ಮಹೇಶ್ ಎಂ ಎಸ್ ರವರು ಕುಂಟಾಡಿಯ ಜಾಗದ ತೋಟಕ್ಕೆ ಬಂದು ನೋಡಿದಾಗ ಗೋಡಾನಿನ ಬಾಗಿಲ ಬೀಗ ಮುರಿದು ರಬ್ಬರ್ ಶಿಟ್, ಹುಲ್ಲುಕಟ್ಟಿಂಗ್ ಮಾಡುವ ಯಂತ್ರ , ಹಾಗೂ ಸ್ಪ್ರೇ ಮಿಷನ್ ಕಳುವಾಗಿದ್ದು ಈ ವಸ್ತು ಗಳನ್ನು ಮನೆಕೆಲಸಕ್ಕಿದ್ದ ಜೈಮೊಹನ್ ಮತ್ತು ಜಾಜಿ ಮೊಲ್ ಎಂಬವರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.,
ಕಳುವಾದ ರಬ್ಬರ್ ಶೀಟಿನ ಅಂದಾಜು ಮೌಲ್ಯ 1,30,000 ಹಾಗೂ ಹುಲ್ಲು ಕಟ್ಟಿಂಗ್ ಮಿಷನಿನ ಮೌಲ್ಯ 10,000, ಸ್ಪ್ರೆ ಮಿಷನಿನ ಮೌಲ್ಯ 2,000 ಆಗಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.