ಕಾರ್ಕಳಹೆಬ್ರಿ

ಫಲಪುಷ್ಪ ಪ್ರದರ್ಶನ: ಮಳಿಗೆ ತೆರೆಯಲು ಅವಕಾಶ

ತೋಟಗಾರಿಕೆ ಇಲಾಖೆ, ಉಡುಪಿ ಇವರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಿಂದ 28ರ ವರೆಗೆ ರೈತ ಸೇವಾ ಕೇಂದ್ರ, ಶಿವಳ್ಳಿ ತೋಟಗಾರಿಕೆ ಕ್ಷೇತ್ರ, ದೊಡ್ಡಣಗುಡ್ಡೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.


ಸದರಿ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ಯಮದಾರರು, ಯಂತ್ರೋಪಕರಣ ಮಾರಾಟಗಾರರು, ಬ್ಯಾಂಕ್ ಹಾಗೂ ಆಹಾರ ಮಳಿಗೆದಾರರಿಗೆ 100 ಚದರ ಅಡಿ ಗಾತ್ರದ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸದರಿ ಮಳಿಗೆಗೆ ರೂ. 3500/- ರಂತೆ ದರವನ್ನು ನಿಗದಿಪಡಿಸಲಾಗಿದ್ದು, ಸದರಿ ಮಳಿಗೆಗಳಲ್ಲಿ ತೋಟಗಾರಿಕೆ ಚಟುವಟಿಕೆ ಹೊಂದಿರುವವರಿಗೆ ಹಾಗೂ ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುವುದು.


ಮಳಿಗೆ ತೆರೆಯಲು ಆಸಕ್ತರು ಮಳಿಗೆಗಳ ಮೊತ್ತವನ್ನು ಆನ್‌ಲೈನ್ ಮೂಲಕವೇ ರೈತ ಸೇವಾ ಕೇಂದ್ರ ಖಾತೆಗೆ ಪಾವತಿಸಿ ತಮ್ಮ ಹೆಸರನ್ನು ಜನವರಿ 20 ರ ಒಳಗಾಗಿ ನೊಂದಾಯಿಸಿಕೊಳ್ಳಬಹುದಾಗಿದೆ. ಮಳಿಗೆ ಹೆಸರು ನೋಂದಾಯಿಸಲು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ರಾಜ್ಯವಲಯ, ಉಡುಪಿ ದೂರವಾಣಿ ಸಂಖ್ಯೆ: 7892326323 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

 

Related posts

ಡಾ| ಅರುಣ್ ಉಳ್ಳಾಲ್ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವುದು ಖಂಡನೀಯ: ರಮಿತಾ ಶೈಲೇಂದ್ರ

Madhyama Bimba

ಕುದುರೆಮುಖ ರಕ್ಷಿತಾರಣ್ಯದೊಳಗೆ ಭೇಟೆಯಾಡುವ ಪ್ರಯತ್ನ: 5 ಮಂದಿ ಮೇಲೆ ಕೇಸು ದಾಖಲು

Madhyama Bimba

ಕಾರ್ಕಳ: ರಾಜ್ಯ ಕಬಡ್ಡಿ ಆಟಗಾರ ಮುಟ್ಲುಪಾಡಿ ಪ್ರೀತಂ ಶೆಟ್ಟಿ ಹೃದಯಘಾತದಿಂದ ಸಾವು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More