ಅಜೆಕಾರು: ಕೆರ್ವಾಶೆ ಗ್ರಾಮದ ನಡ್ವಾಲು ಎಂಬಲ್ಲಿ ರಕ್ಷಿತಾರಣ್ಯದೊಳಗೆ ಭೇಟೆಯಾಡಲು ಹೋಗುತ್ತಿದ್ದ 4 ಮಂದಿ ಮೇಲೆ ಕೇಸು ದಾಖಲಾಗಿದೆ.
ದಿನಾಂಕ 30.10.2024 ರಂದು ಅಭಿಲಾಷ್ ಎಸ್.ಬಿ, ಉಪ ವಲಯ ಅರಣ್ಯ ಅಧಿಕಾರಿ, ಅಂಡಾರು ವನ್ಯಜೀವಿ ಘಟಕ (ಹೆ.ಪ್ರ.), ಕಾರ್ಕಳ ವನ್ಯಜೀವಿ ವಲಯ, ಕಾರ್ಕಳ ಇವರು ಇಲಾಖಾ ಮೇಲಾಧಿಕಾರಿ ಹಾಗೂ ಅಧೀನ ಸಿಬ್ಬಂದಿಯವರೊಂದಿಗೆ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ದಿನಾಂಕ 31.10.2024ರ ಮುಂಜಾನೆ 12.40ರ ವೇಳೆಗೆ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ನಡ್ವಾಲು ಎಂಬಲ್ಲಿ ಆರೋಪಿಗಳು ಬೇಟೆಯಾಡುವ ಉದ್ದೇಶದಿಂದ ನಾಡಕೋವಿಯನ್ನು ಇಟ್ಟುಕೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೀಸಲು ಅರಣ್ಯದ ಒಳಗಡೆ ಪ್ರವೇಶಿಸಿದ್ದು, ಆರೋಪಿಗಳಲ್ಲಿ 1] ವಸಂತ, 2] ಜಯ, 3] ರಾಕೇಶ್ ಇವರನ್ನು ದಸ್ತಗಿರಿ ಮಾಡಲಾಗಿದೆ.
ಇವರಲ್ಲಿ ಸಂತೋಷ್ ಓಡಿ ಹೊಗಿದ್ದು ತಲೆ ಮರೆಸಿಕೊಂಡಿರುತ್ತಾನೆ. ಬಂಧಿತ ಆಪಾದಿತರನ್ನು ನ್ಯಾಯಾಧೀಶರ ಆದೇಶದನ್ವಯ ದಿನಾಂಕ 31.10.2024ರಂದು ಜಿಲ್ಲಾ ಕಾರಾಗೃಹ, ಹಿರಿಯಡ್ಕ, ಉಡುಪಿ ಜಿಲ್ಲೆ. ಇವರ ಅಧೀನಕ್ಕೆ ನೀಡಲಾಗಿರುತ್ತದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.