ಕಾರ್ಕಳ

ಕಾರ್ಕಳ ಶಾರದ ಮಹಿಳಾ ಮಂಡಲದ ವಾರ್ಷಿಕೋತ್ಸವ

“ಯಾವುದೇ ಸಂಘ ಸಂಸ್ಥೆಗಳು ಸಕ್ರಿಯವಾಗಿ ಕೆಲಸ ಮಾಡಬೇಕಾದರೆ ಸದಸ್ಯರ ಸಹಕಾರ ಅಗತ್ಯ. ನಾನು ಎಂಬ ಸ್ವಾರ್ಥಕ್ಕಿಂತ ನಾವು ಎಂಬ ಭಾವನೆ ಇರಬೇಕು. ಸಂಘದ ಮೂಲ ಉದ್ದೇಶ ಸಮಾಜಕ್ಕಾಗಿ ಕೆಲಸ ಮಾಡುವುದಾಗಿರಬೇಕು ಜೊತೆಗೆ ಆನ್ಲೈನ್ ವ್ಯಾಪಾರ ದಲ್ಲಿ ವ್ಯವಹಾರ ಬಿಟ್ಟು ಸ್ಥಳೀಯ ವ್ಯಾಪಾರಿಗಳಿಂದ ಖರೀದಿಸ ಬೇಕು. ಇದರಿಂದ ಸ್ವದೇಶೀ ವಸ್ತುಗಳಿಗೆ ಪ್ರೋತ್ಸಹ ನೀಡಿದಂತಾಗುತ್ತದೆ. ಕಷ್ಟದಲ್ಲಿರುವವರಿಗೆ ನಾವು ಸಹಾಯ ಮಾಡಿದರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಶಾರದ ಮಹಿಳಾ ಮಂಡಲ ಮೂವತ್ತನಾಲ್ಕು ವರ್ಷಗಳಿಂದ ಹಲವಾರು ಕಾರ್ಯಕ್ರಮ ಮಾಡುತ್ತಿರುವುದು ಪ್ರಶಂಸನಿಯಾ “ಎಂದು ಪ್ರಸಿದ್ದ ವೈದ್ಯೆ ಶ್ರೀಮತಿ ನಂದಾ ಪೈ ನುಡಿದರು.


ಅವರು ಕಾರ್ಕಳ ಅನಂತಶಯನದ ಶಾರದ ಮಹಿಳಾ ಮಂಡಲದ ೩೪ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸದಸ್ಯರ ಸಾಮಾಜಿಕ ಕಳಕಳಿಯನ್ನು ಮೆಚ್ಚಿಕೊಂಡು ಇನ್ನು ಮುಂದೆಯೂ ನಿಮ್ಮ ಸಮಾಜಮುಖಿ ಕಾರ್ಯಗಳು ನಡೆಯಲಿ. ಒಗ್ಗಟ್ಟಿನಿಂದ ಕೆಲಸಮಾಡಿ ಎಂದು ಕಿವಿಮಾತು ನುಡಿದರು.


ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂಸ್ಥೆ ಬಡವರು ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನಸಹಾಯ, ಶಾಲೆಗೆ ಕುಡಿಯುವ ನೀರಿನ ಬಾವಿ ರಚನೆ ಮತ್ತು ಅಂಗಳಕ್ಕೆ ಮೇಲ್ಚಾವಣಿ ನಿರ್ಮಾಣಕ್ಕೆ ಧನಸಹಾಯ, ಶಾಲೆಗೆ ಅಗತ್ಯವಾದ ಕಪಾಟುಗಳನ್ನ ನೀಡುತ್ತಾ ಬಂದಿದ್ದೇವೆ. ಮಂಡಳಿಯ ಸದಸ್ಯರ ಪ್ರತಿಭೆಗೆ ಪ್ರೋತ್ಸಹ ನೀಡುತ್ತಿದ್ದೇವೆ. ಅಲ್ಲದೇ ಹಲವು ಮಾಹಿತಿ ಕಾರ್ಯಗಾರ ಶಿಬಿರಗಳನ್ನು ನಡೆಸಿದ್ದು, ಇತ್ತೀಚೆಗೆ ಅಗ್ನಿ ಅವಘಡದಿಂದ ಮನೆ ಸುಟ್ಟುಹೋದ ಎಸ್ ವಿ ಟಿ ಶಾಲಾ ವಿದ್ಯಾರ್ಥಿಯ ಮನೆಗೆ ಭೇಟಿಯಾಗಿ ಸಹಾಯ ಧನ ನೀಡುವುದಾಗಿ ಭರವಸೆ ನೀಡಿದರು.


ಮುಖ್ಯ ಅಥಿತಿಗೆ ಸ್ಮರಣೆಕೆ ನೀಡಿ ಗೌರವಿಸಲಾಯಿತು.

ಶ್ರೀಮತಿ ವಿಜಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸೌಮ್ಯ ಬಳಗದ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಶ್ರೀಮತಿ ಉಮಾ ಚಿಪ್ಲೋನ್ ಕರ್ ಸ್ವಾಗತಿಸಿದರು. ಶ್ರೀಮತಿ ಶೈಲಜಾ ರತ್ನಾಕರ್ ಅತಿಥಿಗಳನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಶ್ರೀಮತಿ ಹರ್ಷಾಕಾಮತ್ ವರದಿ ವಾಚಿಸಿದರು. ಶ್ರೀಮತಿ ಶಶಿಕಲ ರಾವ್ ಸಂದೇಶವಾಚನ ಮಾಡಿದರು. ಶ್ರೀಮತಿ ಶುಭ ಕೆದಿಲಾಯ ಭಜನಾ ಕಾರ್ಯಕ್ರಮಗಳ ವರದಿ ನೀಡಿದರು. ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಮತಿ ಸ್ವಾತಿ ಸಂತೋಷ್ ಮತ್ತು ಮಲ್ಲಿಕಾ ಹೆಬ್ಬಾರ್ ಬಹುಮಾನ ವಿತರಣೆಗೆ ಸಹಕರಿಸಿದರು. ತಿಂಗಳ ಅದೃಷ್ಟವಂತ ಸದಸ್ಯೆ ಯಾಗಿ ಆಯ್ಕೆಗೊಂಡ ಶ್ರೀಮತಿ ಸ್ವಾತಿ ಸಂತೋಷ್ ಗೆ ಅಧ್ಯಕ್ಷರು ಬಹುಮಾನ ನೀಡಿದರು. ಪ್ರತಿವರ್ಷದಂತೆ ಶಾಲೆಗೆ ಟೇಬಲ್ ಕೊಡುಗೆ ನೀಡಲಾಯಿತು. ಬಹುಮಾನಗಳ ಪ್ರಯೋಜಕರಾದ ಶ್ರೀಮತಿ ಐ. ಕೆ. ಸುವಾಸಿನಿಯವರಿಗೆ ಅಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯದರ್ಶಿ ಶ್ರೀಮತಿ ಸುಧಾ ಪ್ರಭು ಧನ್ಯವಾದ ಸಲ್ಲಿಸಿದರು.


ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಫಾಟಕ್ ಮತ್ತು ಶ್ರೀಮತಿ ಶಾರ್ವರಿ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.
ಸದಸ್ಯೆಯರಿಂದ ಗಾಯನ ನರ್ತನ ಮತ್ತು ದಕ್ಷಯಜ್ಞ ನಾಟಕ ಸಭಿಕರ ಪ್ರಶಂಸೆಗೆ ಪಾತ್ರವಾಯಿತು.

Related posts

ಮುದ್ರಾಡಿ ಕೈಕಂಬ: ಬೈಕ್‌ಗೆ ಕಾರು ಅಪಘಾತ- ಗಾಯ

Madhyama Bimba

ಬೆಳ್ಮಣ್ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೋಟೋಗ್ರಾಫಿ ತರಬೇತಿ ಕಾರ್ಯಗಾರ.

Madhyama Bimba

ಕಾರ್ಕಳ ಶ್ರೀ ಶಾರದಾ ಪೂಜಾ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More