ಕಾರ್ಕಳ

ಕಾರ್ಕಳ ಶ್ರೀ ಶಾರದಾ ಪೂಜಾ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟನೆ

ಕಾರ್ಕಳ: ಕಾರ್ಕಳದ ಪ್ರತಿಷ್ಠಿತ ಜೈ ಹಿಂದ್ ಗೇಮ್ಸ್ ಕ್ಲಬ್ ಸದಸ್ಯರು 1979ರಲ್ಲಿ ಪ್ರಾರಂಭಿಸಿದ ಶ್ರೀ ಶಾರದಾ ಪೂಜಾ ಸಮಿತಿ ರಿಜಿಸ್ಟರ್ಡ್ ಕಾರ್ಕಳ ಇದರ ನೂತನ ಕಾರ್ಯಾಲಯವು ಅ. 06ರಂದು ಗಣ ಹೋಮ ಹಾಗೂ ಲಕ್ಷ್ಮಿ ಪೂಜೆಯ ಮೂಲಕ ಉದ್ಘಾಟನಾ ಸಮಾರಂಭ ನಡೆಯಿತು.


ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಕಲ್ಯಾಣ ಮಂದಿರ ಬಳಿ ಇರುವ ನೂತನ ಕಟ್ಟಡದಲ್ಲಿ ಕಾರ್ಕಳ ಶ್ರೀ ವೆಂಕಟರಮಣ ದೇವಳದ ಮೊಕ್ತೇಸರರಾದ ಜಯರಾಮ್ ಪ್ರಭು ದೀಪ ಬೆಳಗಿಸಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಎಸ್ ವಿ ಟಿ ಮೊಕ್ತೇಸರರಾದ ಗಣೇಶ್ ಕಾಮತ್, ಅರ್ಚಕರಾದ ರವೀಂದ್ರ ಪುರಾಣಿಕ್, ಅನಿಲ್ ಜೋಶಿ, ವಿಶ್ವನಾಥ ತಂತ್ರಿ, ವರುಣ್ ತಂತ್ರಿ, ರಾಜಾರಾಮ್ ಭಟ್, ಮಾಧವೇಂದ್ರ ಭಟ್, ಗಣೇಶ್ ಭಟ್, ಶ್ರೀ ಶಾರದ ಪೂಜಾ ಸಮಿತಿಯ ಸಂಚಾಲಕರಾದ ಕೆ ಮುಕುಂದ ಶೆಣೈ, ಸ್ಥಾಪಕ ಸದಸ್ಯರುಗಳಾದ ಕೆ ಗಣೇಶ್ ಕಾಮತ್, ಕೆ ದಿನೇಶ್ ಭಟ್, ಟಿ ಗುರುದಾಸ್ ರಾವ್, ನರಸಿಂಹ ಪೈ, ಬಿ ಸತ್ಯನಾರಾಯಣ ಶೆಣೈ, ಶ್ರೀನಿವಾಸ ಮಲ್ಯ, ಕೆ ಗಣೇಶ್ ಭಟ್ ಕಲ್ಯಾಣಪುರ, ಯೋಗೀಶ ಪ್ರಭು ಕೆವಿಪಿ, ಹರೀಶ್ ಶೆಣೈ, ಶ್ರೀಧರ್ ಕಾಮತ್, ಹರೀಶ್ ಪೈ, ಸುರೇಶ್ ಪೈ ಹಾಗೂ ಇತರ ಯುವ ಸದಸ್ಯರು ಭಾಗವಹಿಸಿದ್ದರು.


ಕೆ ದೀಪಕ್ ನಾಯಕ್, ಶ್ರೀನಿವಾಸ ಪೈ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ನೂತನ ನಿವೇಶನ ಅನಾವರಣ

Madhyama Bimba

ವರಂಗ: ವಿಶ್ವ ಪರಿಸರ ದಿನಾಚರಣೆ

Madhyama Bimba

ಮೂರ್ತೆದಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More