ಮೂಡುಬಿದಿರೆ ಬನ್ನಡ್ಕ ಪಾಡ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಕ್ಲಸ್ಟರ್ ಮಟ್ಟದ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ಇಲಾಖೆ ನಿರ್ದೇಶನದಂತೆ ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು.
11 ಶಾಲೆಗಳ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಪೋಷಕರು ಶಿಕ್ಷಕರು ಸೇರಿ ಸುಮಾರು 200 ಮಂದಿ ಹಾಜರಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ರಾದ ಡಾ, ಅಕ್ಷತಾ ಆದರ್ಶ್ ಅವರು ನೆರವೇರಿಸಿ ಮಕ್ಕಳು ಕಲಿಕೆಯೊಂದಿಗೆ ಫರಾಮರ್ಶಿಸುವ ಗುಣವನ್ನು ಹೊಂದಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್ ವಹಿಸಿದ್ದು ಪಂಚಾಯತ್ ಸದಸ್ಯರಾದ ನಿತಿನ್ ಮತ್ತು ಶ್ರೀಮತಿ ಟೆಸ್ಲಿನ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಲಲಿತ ಶಿಕ್ಷಣ ಸಂಯೋಜಕಿ; ಸ್ಮಿತಾ ಮಿರಾಂದ ಸಮನ್ವಯಾಧಿಕಾರಿ ಸೌಮ್ಯ ನ್‌ಪಿಎಸ್ ಸಂಘದ ರಾಜ್ಯ ಸಹ ಕಾರ್ಯದರ್ಶಿ ಮೋಹನ್ ಕೊಳವಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ವಿ ಶೆಣೈ ಕಾರ್ಯಕ್ರಮ ನಿರೂಪಿಸಿ ಸ್ಮಿತಾ ಮಿರಂದ ಸ್ವಾಗತಿಸಿ ಸೌಮ್ಯ ಪ್ರಾಸ್ತಾವಿಕ ಮಾತುಗಳಾಡಿದರೆ ಸಿ ಆರ್ ಪಿ ದಿನಕರ್ ವಂದಿಸಿದರು. ಏಳು ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದು ಬಹುಮಾನ ವಿತರಿಸಲಾಯಿತು.