ಬೆಳುವಾಯಿ ಗ್ರಾಮ ಸಮಾಜ ಸೇವಾಭಿವೃದ್ಧಿ ಸಮಿತಿ ಬೆಳುವಾಯಿ ಶ್ರೀ ಧರ್ಮಅರಸು, ಶ್ರೀ ಕುಕ್ಕಿನಂತಾಯಿ, ಶ್ರೀ ಕೊಡಮಂತಾಯಿ, ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರ ಬೆಳುವಾಯಿ ಹೋಮಲ್ಕೆಯಲ್ಲಿ ವರ್ಷಾವಧಿ ಜಾತ್ರೆಯು ಫೆ. 21 ರಿಂದ 23ರವರೆಗೆ ಜರಗಲಿದೆ.
ಫೆ. 21ರಂದು ಅಪರಾಹ್ನ ಗಂಟೆ 3.00ಕ್ಕೆ ಮಾಲಾಡಿ ಬೀಡಿನಿಂದ ಶ್ರೀ ಕುಕ್ಕಿನಂತಾಯಿ ದೈವ, ಬಡಕೋಡಿ ಗುತ್ತುವಿನಿಂದ ಶ್ರೀ ಧರ್ಮಅರಸು ಶ್ರೀ ಕೊಡಮಂತಾಯಿ ದೈವಗಳ ಮತ್ತು ಮೊರಂತಬೆಟ್ಟು ಬರ್ಕೆಯಿಂದ ಶ್ರೀ ಬ್ರಹ್ಮಬೈದರ್ಕಳ ಭಂಡಾರ ಹೊರಡುವುದು. ಸಾಯಂಕಾಲ ಗಂಟೆ 5.30ಕ್ಕೆ ಶ್ರೀ ಕ್ಷೇತ್ರಕ್ಕೆ ಭಂಡಾರ ಆಗಮಿಸಿ, ತೋರಣ ಮುಹೂರ್ತ, ಸ್ಥಳ ಶುದ್ಧೀಕರಣ, ಕಲಶ ಶುದ್ಧೀಕರಣ ಗೊಂಡು ರಾತ್ರಿ ಗಂಟೆ 7.30ಕ್ಕೆ ಧ್ವಜಾರೋಹಣ ನಡೆಯಲಿದೆ. ರಾತ್ರಿ ಗಂಟೆ 8.00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಶ್ರೀ ಧರ್ಮಅರಸು ದೈವದ ನೇಮ, ಶ್ರೀ ಕುಕ್ಕಿನಂತಾಯಿ, ಶ್ರೀ ಕೊಡಮಂತಾಯಿ ದೈವಗಳ ನೇಮ ನಡೆಯಲಿದೆ.
ಫೆ. 22ರಂದು ರಾತ್ರಿ ಗಂಟೆ 7.30ರಿಂದ ಶ್ರೀ ಬ್ರಹ್ಮಬೈದರ್ಕಳ ತರ್‍ಸಾಲೆ ಹೊರಡುವುದು. ಸಾರ್ವಜನಿಕ ಅನ್ನಸಂತರ್ಪಣೆ, ಶ್ರೀ ಬ್ರಹ್ಮಬೈದರ್ಕಳ ನೇಮ ನಡೆಯಲಿದೆ.
ಫೆ. 23ರಂದು ಸಾಯಂಕಾಲ 3.00 ಗಂಟೆಯಿಂದ ಶ್ರೀ ಮಾಯಾಂದಾಲೆ ದೇವಿಯ ನೇಮ, ಧ್ವಜಾವರೋಹಣ, ಸಂಪ್ರೋಕ್ಷಣೆ, ಶ್ರೀ ದೈವಗಳ ಭಂಡಾರ ನಿರ್ಗಮನ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಭಾಗವಹಿಸಿ ಯಶಸ್ವಿಗೊಳಿಸು ವಂತೆ ಶ್ರೀ ಕ್ಷೇತ್ರದ ಪ್ರಧಾನ ಪುರೋಹಿತರು ಅನಂತಪದ್ಮನಾಭ ಅಸ್ರಣ್ಣ, ಸಮಿತಿಯ ಅಧ್ಯಕ್ಷರು ಹರ್ಷವರ್ಮ ಹೆಗ್ಡೆ, ಗೌರವ ಅಧ್ಯಕ್ಷರು ರವಿ ಎಸ್. ಅಂಚನ್, ನಾರಾಯಣ ಬಿ. ಪೂಜಾರಿ, ಕಾರ್ಯದರ್ಶಿ ಸುರೇಶ್ ಭಟ್ ಕುಕ್ಕುಡೇಲು, ಕೋಶಾಧಿಕಾರಿ ಅಣ್ಣಿ ಬಿ. ಪೂಜಾರಿ, ಉಪಾಧ್ಯಕ್ಷರು ಭಾಸ್ಕರ ಎಸ್. ಕೋಟ್ಯಾನ್, ರಾಜೇಶ್ ಸುವರ್ಣ, ಜಯರಾಮ ಪೂಜಾರಿ, ಜತೆ ಕಾರ್ಯದರ್ಶಿಗಳು ವಿಜಯ ಕುಮಾರ್, ರಾಮ್‌ಪ್ರಸಾದ್, ಉಮೇಶ್ ಕೋಟ್ಯಾನ್, ಗುತ್ತುಬರ್ಕೆಯವರು ಹಾಗೂ ಕಾರ್ಯಕಾರಿ ಸಮಿತಿಯವರು ವಿನಂತಿಸಿದ್ದಾರೆ.