ಬೆಳುವಾಯಿ ಆನೆಬೆಟ್ಟು ಮೀನಯ್ಯ ಪೂಜಾರಿ (84ವ) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, 7 ಗಂಡು, 1 ಹೆಣ್ಣು ಮೂವರು ಸಹೋದರರು, ಈರ್ವರು ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕೃಷಿಕರಾಗಿದ್ದ ಅವರು ಬೆಳುವಾಯಿ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ, ಹೋಮಲ್ಕೆ ಗರಡಿ ಹಾಗೂ ಇತರ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.