ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಲ್ಲಿ ಮಹಿಳಾ ಘಟಕದ ವತಿಯಿಂದ ರಾಷ್ಟೀಯ ಮಹಿಳಾ ದಿನಾಚರಣೆಯನ್ನು ಮಾ. ೦೮ರಂದು ಆಚರಿಸಲಾಯಿತು.
ಮುನಿಯಾಲು ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಶ್ರೀಮತಿ ಆಶಾ ಪ್ರಕಾಶ್ ಕೊಟಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತೆ ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಹಿಳೆಯರ ಸಾಧನೆ ಮತ್ತು ತ್ಯಾಗದ ಬಗ್ಗೆ ಮಾತನಾಡಿ ಐತಿಹಾಸಿಕವಾಗಿ ಅವರ ಪಾತ್ರ ಮತ್ತು ಕೊಡುಗೆಗಳ ಬಗ್ಗೆ ತಿಳಿಸಿಕೊಟ್ಟರು. ಮಹಿಳೆಯರ ಶಿಕ್ಷಣದ ಮಹತ್ವ ಮತ್ತು ಸ್ವಾವಲಂಭನೆ ಬಗ್ಗೆ ಮುಂದಿನ ಪೀಳಿಗೆಯವರಿಗೆ ಸ್ಪೂರ್ತಿ ತುಂಬಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಕೆ.ಜಿ. ಸುಧಾಕರ್ ರವರು ಸಂವಿಧಾನದ ಅಡಿಪಾಯವೇ ಮಾತೃ ಮಮತೆಯ ಸಮಾನತೆ ಮೇಲೆ ನಿಂತಿದೆ ಎಂದು ತಿಳಿಸುತ್ತಾ ಮಹಿಳೆಯರು ಪ್ರಗತಿ ಹೊಂದಿದರಷ್ಟೆ ಸಮಾಜದ ಏಳಿಗೆ ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿನಿ ಕು. ಗಾಯತ್ರಿ ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಮಹಿಳಾ ಘಟಕದ ಸಂಚಾಲಕರಾದ ಕು. ಬಿಂದು. ಎ ರವರು ಪ್ರಾಸ್ತವಿಕ ನುಡಿಗಳ್ನಾಡಿದರು. ವಿದ್ಯಾರ್ಥಿನಿ ಕು. ಯೋಗಿತ ವಂದಿಸಿದರು. ವಿದ್ಯಾರ್ಥಿನಿ ಕು. ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ವಗ೯ದವರು ಮತ್ತು ವಿದ್ಯಾಥಿ೯-ವಿದ್ಯಾಥಿ೯ನಿಯರು ಉಪಸ್ಥಿತರಿದ್ದರು.