ಅಜೆಕಾರು ಜ್ಯೋತಿ ಮಹಿಳಾ ಮಂಡಲದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಜ್ಯೋತಿ ಕಾಲೇಜುವಿನ ಪ್ರಾಂಶುಪಾಲ ಸಗಾಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ ಮಹಿಳೆಯರು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿ ಆದರ್ಶ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು ಎಂದರು.
ದೇವಸ್ಥಾನದ ಅರ್ಚಕ ರಂಗನಾಥ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಸ್ವಾವಲಂಬಿಯಾಗಿ ಆರ್ಥಿಕ, ಸಾಮಾಜಿಕ, ಸಾಂಸ್ಕ್ರತಿಕವಾಗಿ ಸಾಮಾಜಿಕವಾಗಿ ಬೆಳೆಯಬೇಕೆಂದರು.
ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕಿ ಸಿ.ಲೀಝಾ, ನಿವೃತ್ತ ಶಿಕ್ಷಕಿ ಸಿ. ಸುಮಾ, ಚರ್ಚ್ ಆಂಗ್ಲ ಮಾಧ್ಯಮ ಶಿಕ್ಷಕಿ ಪ್ರೆಸಿಲ್ಲಾ ಉಪಸ್ಥಿತರಿದ್ದು ಶುಭಹಾರೈಸಿದರು.
ಅಜೆಕಾರು ದಾಸನಗದ್ದೆ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜಯ ಲಕ್ಷ್ಮಿ ಶೆಟ್ಟಿ ಹಾಗು ಅಂಗನವಾಡಿ ಕಾರ್ಯಕರ್ತೆ ಸುಲೋಚನಾ ರನ್ನು ಫಲಪುಷ್ಪ , ಕಿರು ಕಾಣಿಕೆ, ಹಾರ, ಸೀರೆ ನೀಡಿ ಸಮ್ಮಾನಿಸಲಾಯಿತು. ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಮಹಿಳಾ ಮಂಡಲದ ಅಧ್ಯಕ್ಷೆ ಯಶೋಧ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ವೀಣಾ ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ಪ್ರಾರ್ಥಿಸಿದರು. ವಸಂತಿ ಭಟ್ ಧನ್ಯವಾದ ನೀಡಿದರು.ಅನಿತಾ ಶೆಟ್ಟಿ, ಕ್ರಿಸ್ತಿನಾ, ಲತಾ ಶೆಟ್ಟಿ, ವಿನಾಯಾಕ್ಷಿ, ನಂದಿನಿ, ಮಲ್ಲಿಕಾ, ಸೆಲಿನಾ, ಮೈನಾವತಿ ಸಹಕರಿಸಿದರು.