ಹೆಬ್ರಿಯ ಬೇಳಂಜೆಯಲ್ಲಿ ಮದರಂಗಿ ಕಾರ್ಯಕ್ರಮ ಮಾಡುತ್ತಿದ್ದ ಮನೆಯವರ ಮೇಲೆ ಕೇಸು ದಾಖಲಾಗಿದೆ.
ಮಾ. 15ರಂದು ರಾತ್ರಿ ಬೆಳಂಜೆ ಗ್ರಾಮದ ಈಶ್ವರ ನಗರ ಕೃಷ್ಣ ಮೂರ್ತಿಯವರ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಯಾವುದೇ ಪರವಾನಗಿ ಇಲ್ಲದೆ ಬೆಳಂಜೆ ಗ್ರಾಮದ ಈಶ್ವರ ರವರ ಸಾಯಿ ಸೌಂಡ್ಸ್ ರವರು ತಡ ರಾತ್ರಿ ವರಗೆ ಕರ್ಕಶವಾದ ಡಿಜೆ ಹಾಕಿ ಸಾರ್ವಜನಿಕರಿಗೆ ನೆಮ್ಮದಿಗೆ ಭಂಗ ಉಂಟು ಮಾಡಿರುತ್ತಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.