ನಾನಿಲ್ತಾರ್ ಕುಲಾಲ ಸಂಘ ಸಾಮಾಜಿಕ ಕಳಕಳಿ ಇರುವಂತಹ ಅರ್ಥಪೂರ್ಣ ಕಾರ್ಯಕ್ರಮ ನೆರವೇರಿಸುತ್ತಿರುವುದು, ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸುವುದು ಹೆಮ್ಮೆ ಎಂದು ಮೂಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ ತಿಳಿಸಿದರು.
ಅವರು ಮಾ. 16ರಂದು ನಾನಿಲ್ತಾರ್ ಕುಲಾಲ ಭವನದಲ್ಲಿ ನಡೆದ ಉಚಿತ ಕಿವಿಯ ಶ್ರವಣ ತಪಾಸಣೆ ಶಿಬಿರ, ಅಧಾರ್ ನೋಂದಣಿ, ತಿದ್ದುಪಡಿ, ಅಂಚೆ ಜನ ಸುರಕ್ಷಾ ಅಭಿಯಾನ, ಅಪಘಾತ ವಿಮೆ ಮತ್ತು ಕೇಂದ್ರ ಸರ್ಕಾರದ ಆಯುಶ್ಮಾನ್ ಭಾರತ್ ಯೋಜನೆ ನೋಂದಣಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅತೀ ಶೀಘ್ರದಲ್ಲಿ ಇದೇ ಸಂಘದ ಮುಂಭಾಗ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಜಯರಾಮ್ ಕುಲಾಲ್ ಅಗ್ಗರಟ್ಟ ವಹಿಸಿ ಇಂತಹ ಸಾಮಾಜಿಕ ಚಟುವಟಿಕೆಗಳು ಜನರಿಗೆ ತುಂಬಾ ಉಪಯುಕ್ತವಾಗುತ್ತದೆ ಎಂದರು.
ಕುಂಭ ನಿಧಿ ಸೊಸೈಟಿ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಮಾತನಾಡಿ ಈ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ ಸಂಘದ ಅಧ್ಯಕ್ಷರ ಸಂಘದ ಕಾರ್ಯ ವೈಖರಿ ಬಗ್ಗೆ ಶ್ಲಾಘಿಸಿದರು.
ಮುಂಡ್ಕೂರು ಅಂಚೆ ಪಾಲಕರಾದ ಆನಂದ್ ಅಂಚೆ ಇಲಾಖೆಯ ಸವಲತ್ತುಗಳ ಬಗ್ಗೆ ತಿಳಿಸಿದರು.
ಈಶ್ವರ್ ಮಲ್ಪೆ ತಂಡದ ಡಾ. ಅಂಕಿತ ಶ್ರವಣ ಸಮಸ್ಯೆ ಇರುವವರು ತಪಾಸಣೆ ಮಾಡುವುದು ಅತ್ಯಗತ್ಯ ಎಂದರು.
ಆಯುಶ್ಮಾನ್ ಭಾರತ್ ನೋಂದಣಿಯ ಶ್ರೀಮತಿ ಚೈತ್ರ, ಕಾಂತಾವರ ಕುಲಾಲ ಸಂಘಟನೆ ಅಧ್ಯಕ್ಷರಾದ ವಿಠಲ್ ಮೂಲ್ಯ, ಬೋಳ ಕುಲಾಲ ಸಂಘದ ಅಧ್ಯಕ್ಷ ಗಣೇಶ್ ಕುಲಾಲ್, ಸಂಘದ ಮಾಜಿ ಅಧ್ಯಕ್ಷರಾದ ಮಂಜಪ್ಪ ಮೂಲ್ಯ, ಬೂಗ್ಗು ಮೂಲ್ಯ ಬೇಲಾಡಿ, ಜಗನ್ನಾಥ್ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಆಶಾ ವರದರಾಜ್ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ದಿನೇಶ್ ಕುಮಾರ್, ಶಿಕ್ಷಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿ ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮ ಶ್ರೀಧರ್ ವಂದಿಸಿದರು.