ಆದಿ ದ್ರಾವಿಡ ಸಮುದಾಯದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ ಸುನಿಲ್ ಕುಮಾರ್ ಅವರಿಗೆ ಧನ್ಯವಾದಗಳು – ಶ್ರೀನಿವಾಸ್ ಕಾರ್ಲ
ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಈ ಬಾರಿ ನಮ್ಮ ಕಾರ್ಕಳ ಶಾಶಕರಾದ ಶ್ರಿ ವಿ ಸುನಿಲ್ ಕುಮಾರ್ ರವರು ಕರಾವಳಿಯ ಸಮಸ್ಯೆಗಳ ಕುರಿತು ಮಾತಾಡುತ್ತಿರುವಾಗ ಅದರಲ್ಲಿ ವಿಷೇಶವಾಗಿ ನಮ್ಮ ಆದಿದ್ರಾವಿಡ ಸಮಾಜದ ಸತ್ಯಸಾರಮಾಣಿ ದೇವಸ್ಥಾನಗಳ ಭೂಮಿಗಳ ಸಮಸ್ಯೆಗಳ ಕುರಿತು ಗಟ್ಟಿ ಧ್ವನಿಯಲ್ಲಿ ಮಾತಾಡಿರುವುದು ಇಡೀ ನಮ್ಮ ಆದಿ ದ್ರಾವಿಡ ಸಮಾಜಕ್ಕೆ ಅತ್ಯಂತ ಸಂತೋಷವಾಗಿದೆ ಎಂದು ಶ್ರೀನಿವಾಸ್ ಕಾರ್ಲ ತಿಳಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಪರಿಶಿಷ್ಟ ಜಾತಿಗೆ ಸೇರಿದಂತೆ ಆದಿ ದ್ರಾವಿಡ ಸಮುದಾಯದ ಜನರಿದ್ದಾರೆ. ಈ ನಮ್ಮ ಸಮುದಾಯದ ಕುಲದೇವರುಗಳಾದ ಸತ್ಯಸಾರಮಾಣಿ ದೈವಸ್ಥಾನಗಳು ಪ್ರತಿ ಗ್ರಾಮಗಳಲ್ಲಿ ಇದೆ. ಆದರೆ ಹೆಚ್ಚಿನ ದೈವಸ್ಥಾನಗಳು ಅದಕ್ಕೆ ಸಂಬಂಧಿಸಿದ ಭೂಮಿಗೆ ಯಾವುದೇ ಪಹಣಿಯನ್ನು ಹೊಂದಿರುವುದಿಲ್ಲ ದಶಕಗಳಿಂದ ಈ ಸಮುದಾಯದ ಜನ ತಮ್ಮ ದೈವಸ್ಥಾನದ ಜಾಗದ ದಾಖಲೆಗಳನ್ನು ಮಾಡಲು ಅಲೆದಾಡುತ್ತಿದ್ದಾರೆ. ಈ ಕಾರಣದಿಂದಾಗಿ ಸರ್ಕಾರದಿಂದ ಯಾವುದೇ ಪ್ರಯೋಜನಗಳನ್ನು ಅನುದಾನಗಳನ್ನು ಪಡೆಯಲು ಸಾದ್ಯವಾಗುತ್ತಿಲ್ಲ.
ಇದನ್ನು ಮನಗಂಡು ನಮ್ಮ ಶಾಸಕರು ಇಂತಹ ದೈವಸ್ಥಾನಗಳ ಭೂ ದಾಖಲೆಗಳನ್ನು ಸರಿಪಡಿಸುವುದಕ್ಕೆ ನಿರಂತರ ಪ್ರಯತ್ನವನ್ನು ಪಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ವಿಧಾನ ಸಭಾ ಅಧಿವೇಶನದಲ್ಲಿ ಈ ದೈವಸ್ಥಾನಗಳ ದಾಖಲೆಗಳನ್ನು ಸರಿ ಪಡಿಸಲು ಸರ್ಕಾರ ವಿಷೇಶ ಶ್ರಮ ವಹಿಸಿ ಕಂದಾಯ ಇಲಾಖೆ ವಿಶೇಷ ಅದಾಲತ್ ನಡೆಸಿ ದೈವಸ್ಥಾನಗಳ ಹೆಸರಿನಲ್ಲಿ ಪಹಣಿಯನ್ನು ನೀಡಬೇಕು ಎಂದು ಸರಕಾರದ ಗಮನವನ್ನು ಸೆಳೆದ ಶಾಸಕರ ಪ್ರಯತ್ನ ಖಂಡಿತವಾಗಿಯೂ ಶ್ಲಾಘನೀಯ
ಸ್ವರ್ಣ ಕಾರ್ಕಳದ ಕನಸ್ಸು ಕಟ್ಟಿಕೊಂಡು ಅನೇಕ ಒಳ್ಳೆಯ ಯೋಚನೆ ಮತ್ತು ಯೋಜನೆಗಳನ್ನು ಹಾಕಿ ಕೊಂಡು ನಿರಂತರವಾಗಿ ಅತ್ಯಂತ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮ ವಹಿಸುತ್ತಿರುವ ಶಾಸಕರ ಕನಸಿನ ಯೋಜನೆ ಕಾರ್ಕಳ ನಗರ ಭಾಗದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಅದ್ಭುತವಾಗಿ ಮೂಡಿ ಬರುತ್ತಿದೆ. ಇದು ನಮ್ಮ ಸಮುದಾಯದವರಿಗೆ ಮುಂದಿನ ದಿನಗಳಲ್ಲಿ ತುಂಬಾ ತುಂಬಾ ಅನುಕೂಲವಾಗಲಿದೆ.
ನಮ್ಮೊಂದಿಗೆ ಸದಾ ಜೊತೆಯಲ್ಲಿ ಇದ್ದುಕೊಂಡು ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಮಾನಯ ಶಾಸಕರಾದ ಶ್ರಿ ವಿ ಸುನಿಲ್ ಕುಮಾರ್ ರವರಿಗೆ ನಮ್ಮ ಆದಿ ದ್ರಾವಿಡ ಸಮುದಾಯದ ಪರವಾಗಿ ಹಾಗೂ ನಮ್ಮ ತಾಲೂಕಿನ ಸತ್ಯಸಾರಮಾಣಿ ದೈವಸ್ಥಾನದ ಎಲ್ಲಾ ಸುಮಿತಿಯ ಪರವಾಗಿ ಧನ್ಯವಾದಗಳು ಎಂದು ಶ್ರೀನಿವಾಸ್ ಕಾರ್ಲಾ ಆದಿ ದ್ರಾವಿಡ್ ಕರ್ನಾಟಕ ರಾಜ್ಯ ಉಪಾಧ್ಯಕ್ಷರು ತಿಳಿಸಿದ್ದಾರೆ